March 13, 2026

ಕೊಟ್ಟಿಯೂರು ದೇವಸ್ಥಾನದಿಂದ ವಾಪಸ್ ಆಗುತ್ತಿದ್ದಾಗ ಭೀಕರ ಅಪಘಾತ: ಯುವಕ ಸಾವು

0
image_editor_output_image1564865002-1751632389154.jpg

ಮೈಸೂರು: ಕೊಟ್ಟಿಯೂರು ದೇವಸ್ಥಾನದಿಂದ ವಾಪಸ್ ಆಗುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿ ಮೈಸೂರಿನ ಯುವಕನೊಬ್ಬ ಸಾವನ್ನಪ್ಪಿದ್ದಾನೆ.

ಮೈಸೂರಿನ ಸಿದ್ದಾರ್ಥ್ ಬಡಾವಣೆಯ ಯುವಕ ಅನಂತಭೂಷಣ್ ಸಾವನ್ನಪ್ಪಿದ ಯುವಕ. ಕೇರಳ-ಕರ್ನಾಟಕ ಗಡಿಯ ಕಾಟಿಕೊಳಂ ಸಮೀಪ ಈ ದುರಂತ ಸಂಭವಿಸಿದೆ. ನಿಯಂತ್ರಣ ತಪ್ಪಿ ಸ್ಕೂಟರ್ ಸಹಿತ ಮಳೆ ನೀರು ನಿಂತಿದ್ದ ಹೊಂಡಕ್ಕೆ ಅನಂತಭೂಷಣ್ ಬಿದ್ದಿದ್ದಾನೆ.

ಅದೇ ವೇಳೆ ಬಸ್ ಬಂದ ಕಾರಣ ಯುವಕ ಬಸ್ ನಡಿಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅನಂತ್ ಭೂಷಣ್ ಮೈಸೂರಿನಲ್ಲಿ ಜಿಮ್ ಟ್ರೈನ‌ರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!