S.J.M ನೂತನ ಕೂರತ್ ಡಿವಿಷನ್ ಅಸ್ತಿತ್ವಕ್ಕೆ; ಪದಾಧಿಕಾರಿಗಳ ಆಯ್ಕೆ
ಪುತ್ತೂರು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ S.J.M ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧೀನದಲ್ಲಿ ಬರುವ ಎಲ್ಲಾ ಇಂಗ್ಲೀಷ್ & ಉರ್ದು ಮೀಡಿಯಂ ಮದರಸಾಗಳ ನೂತನ ಡಿವಿಷನ್ ಸಮಿತಿಯಾಗಿ ಕೂರತ್ ಡಿವಿಷನ್ ಎಸ್.ಜೆ.ಎಂ ರಾಜ್ಯ ನಾಯಕರ ಸಮ್ಮುಖದಲ್ಲಿ ಉಪ್ಪಿನಂಗಡಿಯ ಎಸ್. ಜೆ.ಎಂ ಮುಅಲ್ಲಿಂ ಸೆಂಟರ್‌ನಲ್ಲಿ 2025 ಜೂನ್ 30ರಂದು ಅಸ್ತಿತ್ವ ಪಡೆಯಿತು.
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾದ ಅಧೀನದಲ್ಲಿರುವ ಇಂಗ್ಲೀಷ್, ಉರ್ದು ಮೀಡಿಯಂ ಮದರಸಾಗಳು ವ್ಯವಸ್ಥಿತ ಸಿಲೆಬಸ್‌ನೊಂದಿಗೆ ವಿಶೇಷವಾಗಿ ಕಾರ್ಯಾಚರಿಸುತ್ತಿದೆ.
ನೂತನ ಕೂರತ್ ಡಿವಿಷನ್ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಹಂಝತುಲ್ ಕರ್ರಾರ್ ಸಖಾಫಿ ಅಲ್‌ಮುಈನಿ, ಕೋಶಾಧಿಕಾರಿಯಾಗಿ ಅಬ್ದುಲ್ ರಝಾಕ್ ಬಾಖವಿ ಆಯ್ಕೆಯಾದರು.
I.T, ಎಕ್ಷಾಂ, ವೆಲ್ಫೇರ್ ವಿಭಾಗದ ಉಪಾಧ್ಯಕ್ಷರಾಗಿ ಸಯ್ಯಿದ್ ಹುಸೈನ್ ತಂಙಳ್ ಗ್ರೀನ್ ವ್ಯೂ ಸುಳ್ಯ, ಕಾರ್ಯದರ್ಶಿ ಅಬ್ದುಲ್ ಹಮೀದ್ ಸಖಾಫಿ ಈಡನ್, ಮಿಷನರಿ & ಟ್ರೈನಿಂಗ್ ವಿಭಾಗದ ಉಪಾಧ್ಯಕ್ಷರಾಗಿ ಇಬ್ರಾಹಿಮ್ ಮದನಿ ಈಡನ್, ಕಾರ್ಯದರ್ಶಿ ಆಸಿಫ್ ಮುಈನಿ ಅಲ್ ಅಝ್ಹರಿ, ಅಲ್ ಬದ್ರಿಯಾ ನೆಲ್ಯಾಡಿ, ಮ್ಯಾಗಝಿನ್ ವಿಭಾಗದ ಉಪಾಧ್ಯಕ್ಷರಾಗಿ ಇಬ್ರಾಹಿಮ್ ಹಿಶಾಮಿ ದಾರುಲ್ ಹಿಕ್ಮ, ಕಾರ್ಯದರ್ಶಿ ಇಸ್ಮಾಯಿಲ್ ಸಅದಿ ಬದ್ರಿಯಾ ನೆಲ್ಲಿಯಾಡಿ,
ಪಿಂಚಣಿ ವಿಭಾಗದ ಉಪಾಧ್ಯಕ್ಷರಾಗಿ ಹುಸೈನ್ ಸಖಾಫಿ ಈಡನ್, ಕಾರ್ಯದರ್ಶಿ ಮುಹಮ್ಮದ್ ಅಲಿ ಜೌಹರಿ ಈಡನ್, ಮೀಡಿಯಾ ವಿಭಾಗದಲ್ಲಿ ಮಿದ್ಲಾಜ್ ಜೌಹರಿ ಈಡನ್ ಆಯ್ಕೆಯಾದರು.





