March 15, 2026

ಪಾಣೆಮಂಗಳೂರು ಹಳೇ ಸೇತುವೆಯಲ್ಲಿ ಸಂಚಾರ ನಿರ್ಬಂಧ ವಿರುದ್ಧ ಆಕ್ರೋಶ: ಹಳೇ ಸೇತುವೆ ಸಂಚಾರಕ್ಕೆ ಮುಕ್ತ

0
image_editor_output_image-1839856490-1749629644044

ಬಂಟ್ವಾಳ: ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಸಂಚಾರ ನಿರ್ಬಂಧ ಮಾಡಿ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಆದೇಶ ಹೊರಡಿಸಿದ್ದರು.

ಈ ಸೇತುವೆ ಜನಸಾಮಾನ್ಯರ ಬಹುಮುಖ್ಯ ಸಂಪರ್ಕ ಕೊಂಡಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಬಿರುಸಿನ ಚರ್ಚೆ ನಡೆದು ದ್ವಿಚಕ್ರ ಹಾಗು ತ್ರಿಚಕ್ರ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು  ಪುರಸಭಾ ಸದಸ್ಯರೊಬ್ಬರು ಆಗ್ರಹಿಸಿ ಸಭಾ ತ್ಯಾಗ ಮಾಡಿದ್ದರು.

ಸಾರ್ವಜನಿಕರ ಮನವಿಯ ಮೇರೆಗೆ ಸೇತುವೆಯ ಎರಡೂ ಬದಿ ಅಡ್ಡಲಾಗಿ ಇಟ್ಟ ಬ್ಯಾರಿಕೇಡ್ ಅನ್ನು ಪುರಸಭಾ ಸದಸ್ಯರು ಅವರು ಆಕ್ರೋಶಗೊಂಡು ತೆರವುಗೊಳಿಸಿ, ಸಂಚಾರ ಮುಕ್ತ ಗೊಳಿಸಿದರು.

ಬ್ರಿಟಿಷರ ಕಾಲದ ಈ ಸೇತುಯನ್ನು ಸ್ಮಾರಕವಾಗಿ ಉಳಿಸಿ, ಸಾರ್ವಜನಿಕರಿಗೆ ಪರ್ಯಾಯ ಸೇತುವೆ ನಿರ್ಮಿಸಬೇಕೆಂದು ಇದ್ರೀಸ್ ಪಿ ಜೆ ಅವರ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸರಕಾರ ಕೂಡ ಸದ್ಯಕ್ಕೆ ದುರಸ್ತಿ ಮಾಡಲು ಸೂಚಸಿತ್ತು ಅದ್ಯಾವುದನ್ನೂ ಕಾರ್ಯಗತಗೊಳಿಸದೇ ದಿಢೀರ್ ಸಂಚಾರ ನಿಷೇಧಿಸಿರವುದು ಸಾರ್ವಜನಿಕರನ್ನು ಆಕ್ರೋಶಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!