March 13, 2026

ವಿಟ್ಲ: ರಸ್ತೆ ಬದಿಯ ಹೊಂಡಕ್ಕೆ ವಾಲಿನಿಂತ ವಿಟ್ಲ-ಉಪ್ಪಳ ನಡುವೆ ಸಂಚರಿಸುವ ಬಸ್

0
IMG-20250612-WA0006.jpg

ವಿಟ್ಲ: ಪುತ್ತೂರಿನಿಂದ ಉಪ್ಪಳ ಕಡೆಗೆ ಸಾಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕನ ಅತಿಯಾದ ವೇಗದಿಂದ ಬೈರಿಕಟ್ಟೆಯ ಕೆಳಗಿನ ಕ್ರಾಸಿನಲ್ಲಿ ಮಾರ್ಗ ಬಿಟ್ಟು ಹೊಂಡಕ್ಕೆ ವಾಲಿನಿಂತಿದೆ. ಅದೃಷ್ಟವಶಾತ್ ಬಸ್ ಪಲ್ಟಿಯಾಗದೇ ಯಾವುದೇ ಅಪಾಯ ಸಂಭವಿಸದೇ ಪಾರಾಯಿತು.

ಬಸ್ಸಿನಲ್ಲಿ ಕನ್ಯಾನ, ಮುಗುಳಿ ಬಾಯಾರು, ಉಪ್ಪಳಕ್ಕೆ ಹೋಗುವ ನೂರಾರು ಪ್ರಯಾಣಿಕರಿದ್ದರು. ನಿತ್ಯವೂ ಹೀಗೆ ಬಸ್ ಚಾಲಕರ ಅತಿಯಾದ ವೇಗದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು ಭಯಭೀತರಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬೇಜವಾಬ್ದಾರಿ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!