December 15, 2025

ಬೆಳ್ತಂಗಡಿ:  ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ಫೋಸ್ಟ್-ಪ್ರಕರಣ ದಾಖಲು

0
first-information-report

ಬೆಳ್ತಂಗಡಿ: ಸಾಮಾಜಿಕ ಜಾಲತಾಣವಾದ Instagram ಖಾತೆಯ“mangalore_ beary_warrior_03” ಎಂಬ ಪೇಜ್ ನಲ್ಲಿ ವ್ಯಕ್ತಿಯೋರ್ವನು ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳ ಭಾವಚಿತ್ರವನ್ನು ಹೊಂದಿರುವ ಪೋಸ್ಟ್ ಹಾಕಿ, ಅದರೊಂದಿಗೆ ವಿಭಿನ್ನ ಸಮುದಾಯಗಳ ನಡುವೆ ವೈಮನಸ್ಸು ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವಂತಹ ಸಂದೇಶವನ್ನು ಬರೆದಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿತನ ವಿರುದ್ದ ದಿನಾಂಕ: 01.06.2025 ರಂದು ಬೆಳ್ತಂಗಡಿ ಠಾಣೆಯಲ್ಲಿ ಅಕ್ರ ನಂ : 41/2025 ಕಲಂ: 55,103,353(2) ಬಿಎನ್‌ ಎಸ್‌ 2023 ರಂತೆ ಪ್ರಕರಣ ದಾಖಲೀಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!