ಕೇರಳ: ಕುಟುಂಬದ ಐವರ ಹತ್ಯೆ ಪ್ರಕರಣದ ಅರೋಪಿ ಜೈಲಿನಲ್ಲಿ ಆತ್ಮಹತ್ಯೆ ಗೆ ಯತ್ನ
ತಿರುವನಂತಪುರಂ: ವೆಂಜರಮೂಡು ಸಾಮೂಹಿಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಫಾನ್ ರವಿವಾರ ಪೂಜಾಪುರ ಕೇಂದ್ರ ಕಾರಾಗೃಹದೊಳಗೆ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.
ಅಫಾನ್ ಜೈಲಿನ ಸ್ನಾನಗೃಹದಲ್ಲಿ ಧೋತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ತಕ್ಷಣ ಆತನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಿರುವನಂತಪುರಂ ಜಿಲ್ಲೆಯ ವೆಂಜರಮೂಡು ಎಂಬಲ್ಲಿ ಫೆಬ್ರವರಿ 24 ರಂದು ಅಫಾನ್ ತನ್ನ ಕಿರಿಯ ಸಹೋದರ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಫರ್ಸಾನಾ ಅವರನ್ನು ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದ. ಘಟನೆ ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು.




