ವಿಟ್ಲ: ನಾಳೆ (ಮೇ22) ರಿಂದ ಇತಿಹಾಸ ಪ್ರಸಿದ್ಧ ಕಂಬಳಬೆಟ್ಟು ಮಖಾಂ ಉರೂಸ್ ಗೆ ಚಾಲನೆ
ವಿಟ್ಲ: ಇತಿಹಾಸ ಪ್ರಸಿದ್ಧ ಕಂಬಳಬೆಟ್ಟು ಮಖಾಂ ಉರೂಸ್ ಮೇ 22ರಿಂದ 24ರ ವರೆಗೆ ನಡೆಯಲಿದೆ. ಮೇ 22ರಂದು ಸಂಜೆ ಧ್ವಜಾರೋಹಣ ನಡೆಯಲಿದೆ. ರಾತ್ರಿ ಸ್ವಲಾತ್ ಮಜ್ಲಿಸ್ ನಡೆಯಲಿದ್ದು, ಅಸ್ಸಯ್ಯದ್ ಶರಫ್ಪುದ್ದೀನ್ ಅಲ್ ಹೈದ್ರೋಸಿ ತಂಙಳ್ ಎಮ್ಮೆಮಾಡು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮೇ 23ರಂದು ಮಹಮ್ಮದ್ ರಾಫೀ ಹಿಮಮಿ ಕಾಮಿಲ್ ಸಖಾಫಿ ಕೊಡಗು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮೇ 24ರಂದು ಉರೂಸ್ ಸಮಾರೋಪ ಸಮಾರಂಭದಲ್ಲಿ ಖುದ್ವತುಸ್ಸಾದಾತ್ ಅಸ್ಸಯ್ಯದ್ ಕೆ.ಎಸ್ ಅಟ್ಟಕೋಯ ತಂಙಳ್ ಕುಂಬೋಳ್ ದುವಾಃ ನೇತೃತ್ವ ನೀಡಲಿದ್ದಾರೆ. ಮಹಮ್ಮದ್ ರಫೀಕ್ ಸ ಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.





