ಬೋಳಂತೂರು ರೇಂಜ್ ಸುನ್ನೀ ಜಮೀಅತುಲ್ ಮುಅಲ್ಲಿಮೀನ್ ಗೆ ಆಯ್ಕೆ
ಕಲ್ಲಡ್ಕ: ಮೇ 13 ಬೋಳಂತೂರು ರೇಂಜ್ ಮಹಾಸಭೆಯು ಕೆ. ಪಿ ಬೈಲ್ ಬುಸ್ತಾನುಲ್ ಊಲೂಂ ಮದರಸ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಕೆ.ಪಿ ಬೈಲ್ ಖತೀಬ್ ಹಸೀಬ್ ಮದನಿ ದುಆ ಗೈದರು. ಅಶ್ರಫ್ ಸಖಾಫಿ ಉರ್ನಿ ಅಧ್ಯಕ್ಷತೆ ವಹಿಸಿದರು. ಸುನ್ನೀ ಮ್ಯಾನೆಜ್ಮೆಂಟ್ ಅಧ್ಯಕ್ಷರು ಕಬೀರ್ ಸಅದಿ ಉದ್ಘಾಟಿಸಿದರು.
ನೂತನ ಸಮಿತಿ ಅಧ್ಯಕ್ಷರಾಗಿ ಕಬೀರ್ ಸಅದಿ ತಾಳಿತ್ತನೂಜಿ, ಪ್ರಧಾನ ಕಾರ್ಯದರ್ಶಿ ಯಾಗಿ ತನ್ವೀರ್ ಆಹ್ಮದ್ ಹಿಮಮಿ ಸಖಾಫೀ ಬೋಳಂತೂರು, ಕೋಶಾಧಿಕಾರಿಯಾಗಿ ಅಬ್ದುಲ್ ರಶೀದ್ ಸಅದಿ ಅಮ್ಟೂರ್ ಆಯ್ಕೆ ಮಾಡಲಾಯಿತು.
ಪ್ರಸ್ತುತ ಎಕ್ಸಾಮ್ ವಿಭಾಗ ಉಪಧ್ಯಕ್ಷರಾಗಿ ಎ.ಪಿ ಅಬೂಬಕ್ಕರ್ ಸಖಾಫಿ ಸೆರ್ಕಳ, ಕಾರ್ಯದರ್ಶಿ ಆಶಿಫ್ ಮುಈನಿ ಬೋಳಂತುರು, ಪಿಂಚಣಿ ವಿಭಾಗ ಉಪಾಧ್ಯಕ್ಷರಾಗಿ ಝುಬೈರ್ ಅಮಾನಿ ನಾರ್ಶ, ಕಾರ್ಯದರ್ಶಿ ಅಶ್ರಫ್ ಸಅದಿ ಕೆ ಪಿ ಬೈಲ್, ಮಿಷನರಿ ವಿಭಾಗ ಉಪಾಧ್ಯಕ್ಷರಾಗಿ ಅಬ್ದುಲ್ ರಝಕ್ ಸಖಾಫೀ ಸೆರ್ಕಳ ನಗರ, ಕಾರ್ಯದರ್ಶಿ ಅಝೀಝೆ ಮದನಿ ಅಶ್ ಅರಿಯ್ಯ, ಮ್ಯಾಗಝಿನ್ ಉಪಾಧ್ಯಕ್ಷರಾಗಿ ಉಮರ್ ಸಖಾಫೀ, ಕಾರ್ಯದರ್ಶಿ ಸವಾದ್ ಸಅದಿ ನಾಡಾಜೆ, ಕಾರ್ಯಕಾರಿ ಸಮಿತಿ ಅಬ್ದುಲ್ ಹಮೀದ್ ಮದನಿ ಅಶ್ ಅರಿಯ್ಯ, ಅಬ್ದುಲ್ ಲತೀಫ್ ಮದನಿ ಬಾರೆಬೆಟ್ಟು, ಖಲೀಲ್ ಸಅದಿ ಬಸಬೆಟ್ಟು, ಆಯ್ಕೆಯಾಗಿದ್ದಾರೆ.





