ಅಡ್ಕಾರು ಸಮೀಪ ಮಹಿಳೆಗೆ ದ್ವಿಚಕ್ರ ವಾಹನ ಅಪಘಾತ: ಮಹಿಳೆಗೆ ಗಾಯ
ಸುಳ್ಯ: ಅಡ್ಕಾರು ನಿವಾಸಿ ಶಕುಂತಲಾ ಎಂಬ ಮಹಿಳೆಗೆ ಅಡ್ಕಾರು ಸಮೀಪ ಬೈಕ್ ಗುದ್ದಿ ಮಹಿಳೆ ಗಾಯಗೊಂಡ ಘಟನೆ ಇಂದು ವರದಿಯಾಗಿದೆ.
ಪೆರ್ಲಂಪಾಡಿ ನಿವಾಸಿ ಪವನ್ ಎಂಬುವವರು ಮಡಿಕೇರಿಯಲ್ಲಿ ಕೆಲಸ ಮುಗಿಸಿ ಪೆರ್ಲಂಪಾಡಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಶಕುಂತಲಾ ರವರು ಇಂದು ಬೆಳಿಗ್ಗೆ ಸ್ಥಳೀಯವಾಗಿ ನಡೆಯುತ್ತಿದ್ದ ಮೀಟಿಂಗಿನಲ್ಲಿ ಭಾಗವಹಿಸಿ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅವರನ್ನು ಸ್ಥಳಿಯರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆಯುತ್ತಿದ್ದಾರೆ.




