December 15, 2025

ಮಂಗಳೂರು: ಕೇರಳದ ಅಶ್ರಫ್ ನ ಥಳಿಸಿ ಹತ್ಯೆ ಪ್ರಕರಣ: ಮತ್ತೆ ಐದು ಮಂದಿ ಆರೋಪಿಗಳ ಬಂಧನ-ಬಂಧಿತರ ಸಂಖ್ಯೆ 20ಕ್ಕೇರಿಕೆ

0
image_editor_output_image2074386198-1745771805139.jpg

ಮಂಗಳೂರು: ಹೊರವಲಯದ ಕುಡುಪು ಸಮೀಪ ರವಿವಾರ ವ್ಯಕ್ತಿಯೊಬ್ಬರನ್ನು ಸುಮಾರು 30ಕ್ಕೂ ಅಧಿಕ ಜನರಿದ್ದ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 20 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕುಡುಪು ಕಟ್ಟೆಯ ಸಚಿನ್ ಟಿ., ದೇವದಾಸ್, ದೀಕ್ಷಿತ್ ಕುಮಾರ್, ಶ್ರೀದತ್ತ, ಧನುಷ್, ನೀರುಮಾರ್ಗ ಸುಬ್ರಹ್ಮಣ್ಯ ನಗರದ ಸಾಯಿದೀಪ್, ಕುಡುಪು ಮಂಗಳನಗರದ ನಿತೀಶ್ ಕಮಾರ್ ಯಾನೆ ಸಂತೋಷ್, ಮಂಜುನಾಥ್, ವಾಮಂಜೂರು ದೇವರಪದವಿನ ಸಂದೀಪ್, ಕುಡುಪು ಪ್ರಾತಸೈಫ್ ಕಾಲನಿಯ ವಿವಿಯನ್ ಅಲ್ವಾರಿಸ್, ಬಿಜೈ ಕದ್ರಿ ಕೈಬಟ್ಟಲು ನಿವಾಸಿ ರಾಹುಲ್, ಕುಲಶೇಖರ ಜ್ಯೋತಿನಗರದ ಪ್ರದೀಪ್ ಕುಮಾರ್, ಶಕ್ತಿನಗರದ ಪದವು ನಿವಾಸಿ ಮನೀಶ್ ಶೆಟ್ಟಿ, ಕುಲಶೇಖರ ಚೌಕಿಯ ದೀಕ್ಷಿತ್, ಕುಡುಪು ದೇವಸ್ಥಾನದ ಬಳಿಯ ಕಿಶೋರ್ ಕುಮಾರ್, ಕೈಕಂಬದ ಯತಿರಾಜ್, ವಾಮಂಜೂರಿನ ಸಚಿನ್, ಕುಲಶೇಖರ ಪದವಿನ ಅನಿಲ್, ಕುಡುಪುಕಟ್ಟೆಯ ಸುಶಾಂತ್ ಹಾಗೂ ಕುಡುಪು ನಿವಾಸಿ ಆದರ್ಶ್ ಎಂಬವರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೂ ಕ್ರಮ ವಹಿಸಲಾಗಿದೆ ಎಂದು ಅನುಪಮ್ ಅಗರ್ವಾಲ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!