SMA ಬೈತಡ್ಕ ರೀಜನಲ್ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ
ಪುತ್ತೂರು: ಬೈತಡ್ಕ ರೀಜನಲ್ ವ್ಯಾಪ್ತಿಯಲ್ಲಿ ಈ ಬಾರಿ(2025) ಯಾತ್ರೆಗೈಯ್ಯಲಿರುವ ಹಜ್ಜಾಜ್ ಗಳಿಗೆ ಎಸ್.ಎಂ.ಎ ಬೈತಡ್ಕ ರೀಜನಲ್ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಕೂರದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು.
ಎಸ್.ಎಂ.ಎ ಬೈತಡ್ಕ ರೀಜನಲ್ ಅಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಕೂರ ಫಝಲ್ ಜುಮ್ಮಾ ಮಸೀದಿ ಮುದರ್ರಿಸರಾದ ಅಬ್ದುಲ್ ಖಾದರ್ ಫಾಲ್ಹಿಲಿ ರವರು ಆಶಂಸ ಭಾಷಣ ಮಾಡಿ ಹಜ್ಜಾಜ್ ಗಳಿಗೆ ಶುಭ ಕೋರಿದರು.
ಹಜ್ ಯಾತ್ರಾರ್ಥಿಗಳಾದ ಎಸ್.ಎಂ.ಎ ಕೋಶಾದಿಕಾರಿಯೂ ಆದ ಸಾಬು ಹಾಜಿ ಕೆಲೆಂಬಿರಿ, ಕಲ್ಪಡ ಮದ್ರಸ ಅಧ್ಯಕ್ಷರಾದ ಅಬೂಬಕ್ಕರ್ ಕಲ್ಪಡ, ಬದ್ರಿಯಾ ಜುಮ್ಮಾ ಮಸ್ಜಿದ್ ಪುಂಚತ್ತಾರು ಇದರ ಸಮಿತಿ ಸದಸ್ಯರಾದ ಮೊಯಿದೀನ್ ಪುಂಚತ್ತಾರು ಇವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಕೂರ ಫಝಲ್ ಜುಮ್ಮಾ ಮಸ್ಜಿದ್ ಸದರ್ ಉಸ್ತಾದರಾದ ಹಮೀದ್ ಸಖಾಫಿ, ಎಸ್‌ಎಂಎ ಬೈತಡ್ಕ ರೀಜನಲ್ ಉಪಾಧ್ಯಕ್ಷರಾದ ರಝಾಕ್ ಕೂರ, ಸಂಘಟನಾ ಕಾರ್ಯದರ್ಶಿ ಸಾದಿಕ್ ಸಮಹಾದಿ, ಪಲ್ಲತ್ತಾರು ಜುಮ್ಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ಹಾಗೂ ಜಾಫರ್ ಕೂರ ಸೇರಿದಂತೆ ಮತ್ತಿತ್ತರು ಭಾಗವಹಿಸಿದ್ದರು.





