ಬೆಳ್ತಂಗಡಿ: ತಾಲೂಕು ಮುಸ್ಲಿಮ್ ಮುಖಂಡರಿಂದ ಪೋಲಿಸ್ ವರಿಷ್ಠಾಧಿಕಾರಿ ಬೇಟಿ: ತಾಲೂಕಿನಲ್ಲಿ ಪ್ರಸಕ್ತ ಶಾಂತಿ ಭಂಗ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಜರಗಿಸಲು ಮನವಿ
ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಿ ತಾಲೂಕಿನಾದ್ಯಂತ ಶಾಂತಿ ಕದಡಿ ಕೋಮು ಗಲಬೆ ನಡೆಸಲು ಹುನ್ನಾರ ನಡೆಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಮಾನ್ಯ ದ.ಕ.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯನ್ನು ಬೆಳ್ತಂಗಡಿ ತಾಲೂಕು ಮುಸ್ಲಿಮ್ ಮುಖಂಡರ ನಿಯೋಗ ಬೇಟಿ ಮಾಡಿ ಮನವಿ ಸಲ್ಲಿಸಿತು.
ವೇಣೂರು ಠಾಣಾ ವ್ಯಾಪ್ತಿಯ ಪೆರಾಡಿ ಪುರುಷ ಕಟ್ಟುವ ಸಂಪ್ರದಾಯದಲ್ಲಿ ಸಮುದಾಯವನ್ನು ಅವಹೇಳನಕಾರಿಯಾಗಿ ನಟನೆ ಮಾಡಿ ಪ್ರವಾದಿಯವರನ್ನು ನಿಂದಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆದರೆ ಪೋಲಿಸರು ಗಂಭೀರ ಸೆಕ್ಸನ್ ಗಳಡಿ ಪ್ರಕರಣ ದಾಖಲಿಸಿಲ್ಲ. 20ಕ್ಕಿಂತ ಹೆಚ್ಚು ಆರೋಪಿಗಳಿದ್ದರೂ ಕೇವಲ ಆರು ಜನರಿಗೆ ಮಾತ್ರ ನೋಟಿಸು ನೀಡಿ ಜಾಮೀನು ಪಡೆದುಕೊಂಡಿದ್ದು, ಇನ್ನುಳಿದ ಆರೋಪಿಗಳನ್ನು ಬ೦ದಿಸದೇ ತಾರತಮ್ಯ ವೆಸಗುತ್ತಿದ್ದು, ಆರೋಪಿಗಳು ಮತ್ತೊಮ್ಮೆ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಸಂಘ ಪರಿವಾರದ ಚಕ್ರವರ್ತಿ ಸೂಲಿಬೆಲೆ ಸಮುದಾಯವನ್ನು ಟಾರ್ಗೆಟ್ ಮಾಡಿ ಕೋಮು ಪ್ರಚೋದಿತ ಭಾಷಣ ಮಾಡಿ ಕೋಮುಗಲಭೆ ಸೃಷ್ಟಿಸಲು ಷಡ್ಯಂತದ ಬಗ್ಗೆ ಸುಮೋಟೋ ಕೇಸು ದಾಖಲಿಸಬೇಕು ಮತ್ತು ಉಜಿರೆಯಲ್ಲಿ ವಾಲಿಬಾಲ್ ತರಬೇತುದಾರನಿಗೆ ನೈತಿಕ ಪೋಲಿಸ್ ಗಿರಿ ನಡೆಸಿ ತೀವ್ರ ಹಲ್ಲೆ ನಡೆಸಿದ ಬಗ್ಗೆ ಹಾಗೂ ತಾಲೂಕಿನಲ್ಲಿ ವಿವಿಧ ಪ್ರದೇಶಗಳಲ್ಲಿ ಶಾಂತಿ ಕದಡುವ ಬಗ್ಗೆ ಸ್ಥಳೀಯ ಠಾಣಾ ಪೋಲಿಸರು ಮುನ್ನೆಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳುವಂತೆ ಮಾನ್ಯ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಕೆ.ಕೆ.ಶಾಹುಲ್ ಹಮೀದ್ ಜಿಲ್ಲಾದ್ಯಕ್ಷರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ.ದ.ಕ, ನಝೀರ್ ಅಝ್ ಹರಿ ಬೊಳ್ಮಿನಾರ್ ಗೌರವಾದ್ಯಕ್ಷರು ನಾಗರಿಕ ಯುವಜನ ವೇದಿಕೆ ಬೆಳ್ತಂಗಡಿ, ಅಬ್ದುಲ್ ಅಜೀಜ್ ಝುಹ್ರಿ
ಅಧ್ಯಕ್ಷರು ಕಿಲ್ಲೂರು ಜುಮ್ಮಾ ಮಸೀದಿ, ಅಕ್ಬರ್ ಬೆಳ್ತಂಗಡಿ
ಅದ್ಯಕ್ಷರು ಎಸ್.ಡಿ.ಪಿ.ಐ ಬೆಳ್ತಂಗಡಿ ವಿದಾನಸಭಾ ಕ್ಷೇತ್ರ,
ನವಾಝ್ ಶರೀಫ್ ವಕೀಲರು ಅಧ್ಯಕ್ಷರು ನಾಗರಿಕ ಯುವಜನ ವೇದಿಕೆ ಬೆಳ್ತಂಗಡಿ, ಅಬ್ದುಲ್ ಕರೀಮ್ ಗೇರುಕಟ್ಟೆ ಸದಸ್ಯರು ಆರೋಗ್ಯ ರಕ್ಷಾ ಸಮಿತಿ ಜಿಲ್ಲಾ ಆಸ್ಪತ್ರೆ ಮಂಗಳೂರು, ಖಾಲಿದ್ ಪುಲಾಬೆ ಗೌರವಾದ್ಯಕ್ಷರು ಜುಮ್ಮಾ ಮಸೀದಿ ಪಡ್ಡಂದಡ್ಕ, ಹನೀಫ್ ಪುಂಜಾಲ್ ಕಟ್ಟೆ ಸದಸ್ಯರು ಗ್ರಾಮ ಪಂಚಾಯತ್, ಮಹಮ್ಮದ್ ಹನೀಫ್ ಉಜಿರೆ
ಉಪಾದ್ಯಕ್ಷರು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ದ.ಕ, ಆಲಿಯಬ್ಬ ಪುಲಾಬೆ ಕಾರ್ಯದರ್ಶಿ ಜಮೀಯತುಲ್ ಫಲಾಹ್ ಬೆಳ್ತಂಗಡಿ, ಹಕೀಮ್ ಕೊಕ್ಕಡ ಅಧ್ಯಕ್ಷರು ಯುವ ಕಾಂಗ್ರೆಸ್ ಬೆಳ್ತಂಗಡಿ, ಖಾಲಿದ್ ಕಕ್ಯಾನ ಅಧ್ಯಕ್ಷರು ಜುಮ್ಮಾ ಮಸೀದಿ ಲಾಯಿಲ ಭೇಟಿ ಮಾಡಿದರು.





