ಸಿಎಂ ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್: ಶಾಸಕ ಬಸನಗೌಡ ಯತ್ನಾಳ ವಿವಾದಾತ್ಮಕ ಹೇಳಿಕೆ
ಹುಬ್ಬಳ್ಳಿ: ಕಾಂಗ್ರೆಸ್ ಹಿಂದೂಗಳ ಪಕ್ಷವೇ ಅಲ್ಲ. ಅದು ಹುಟ್ಟಿದ್ದು ಮುಸ್ಲಿಮರಿಗಾಗಿ. ಎಲ್ಲಿಯವರಗೆ ದೇಶದಲ್ಲಿ ಮುಸ್ಲಿಮರು ಇರುತ್ತಾರೋ ಅಲ್ಲಿವರೆಗೆ ಅವರು ಕಲ್ಲು ಹೊಡೆಯುವವರು. ಸಿಎಂ ಸಿದ್ದರಾಮಯ್ಯ ಪಾಕಿಸ್ತಾನ ಏಜೆಂಟ್ ಇದ್ದಂತೆ. ಅವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿಯಾಗಲಿ. ಯಾರು ಬೇಡ ಅಂತಾರೇ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
ಸೋಮವಾರ (ಏ.28) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ ಲಾಡ್ ಮೋದಿ ಮುಂದೆ ಬಚ್ಚಾ. ಅವರ ಬಗ್ಗೆ ಹೀಯಾಳಿಸಿ ಮಾತನಾಡಿದರೆ ಸೋನಿಯಾ, ರಾಹುಲ್ ಗಾಂಧಿ ಖುಷಿಯಾಗುತ್ತಾರೆ. ತನ್ನ ಮಂತ್ರಿ ಸ್ಥಾನ ಉಳಿಯುತ್ತದೆ ಎಂದು ಆ ರೀತಿ ಮಾತನಾಡುತ್ತಿದ್ದಾರೆ.
ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಕುಟುಕಿದರು.





