ಅಪಹರಣಕ್ಕೊಳಗಾದ ಕ್ಯಾಬ್ ಚಾಲಕನ ಮೃತದೇಹ ಪತ್ತೆ
ಬೆಂಗಳೂರು: ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಅಪಹರಣಕ್ಕೊಳಗಾದ ಕ್ಯಾಬ್ ಚಾಲಕನ ಮೃತ ದೇಹ ಸಾತನೂರು ಬಳಿ ಪತ್ತೆಯಾಗಿದೆ.
ಅಪಹರಣ ಮಾಡಿರುವ ದುಷ್ಕರ್ಮಿಗಳು ಕ್ಯಾಬ್ ಚಾಲಕನ ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದಿದ್ದಾರೆ. ಚಿಕ್ಕಬ್ಯಾಲಕೆರೆ ನಿವಾಸಿ ಚಂದ್ರಶೇಖರ್ (40) ಹ*ತ್ಯೆಯಾದ ಕ್ಯಾಬ್ ಚಾಲಕ.
ಸುಮಾರು 7-8 ವರ್ಷಗಳಿಂದ ಕ್ಯಾಬ್ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಚಂದ್ರಶೇಖರ್‌ನನ್ನು 3-4 ದಿನಗಳ ಹಿಂದಷ್ಟೇ ಕೆಲ ದುಷ್ಕರ್ಮಿಗಳು ಕಾರಿನಲ್ಲಿ ಅಪ ಹರಣ ಮಾಡಿದ್ದರು. ಈ ಸಂಬಂಧ ಚಂದ್ರಶೇಖರ್ ಪೋಷಕರು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆತನಿಗಾಗಿ ಎಲ್ಲೆಡೆ ಶೋಧ ಕಾರ್ಯ ನಡೆಸಲಾಗಿತ್ತು ಎಂದು ಪೊಲೀಸರು ಹೇಳಿದರು.





