ವಿಷಾನಿಲ ತುಂಬಿದ್ದ ಪಾಳು ಬಾವಿಗೆ ಬಿದ್ದ ವಾಹನ: 12 ಮಂದಿ ಸಾವು
ಮಧ್ಯಪ್ರದೇಶ : ವ್ಯಾನ್ ಒಂದುಪ್ರಯಾಣದ ವೇಳೆ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ವಿಷಾನಿಲ ತುಂಬಿದ್ದ ಪಾಳು ಬಾವಿಗೆ ಬಿದ್ದು 12 ಜನ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಮಂದಸೌರ್‌ನಲ್ಲಿ ನಿನ್ನೆ (ಏ.27) ನಡೆದಿದೆ.
ಮೃತರಲ್ಲಿ ವ್ಯಾನ್‌ನಲ್ಲಿ ಇದ್ದವರು ಮಾತ್ರವಲ್ಲದೆ, ಬೈಕ್ ಸವಾರ ಹಾಗೂ ರಕ್ಷಣೆಗೆ ಬಾವಿಗಿಳಿದ ವ್ಯಕ್ತಿ ಸೇರಿದ್ದಾರೆ. ವ್ಯಾನ್‌ನಲ್ಲಿ ಒಟ್ಟು 15 ಮಂದಿ ಪ್ರಯಾಣಿಸುತ್ತಿದ್ದು, 3 ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಸೇರಿದಂತೆ ವಿವಿಧ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.





