ಹಾಸನ: ದ್ವಿತೀಯ ಪಿಯುಸಿ ಮರುಮೌಲ್ಯಮಾಪನ: ಸಬಾ ಕೌನೈನ್ 595 ಅಂಕ
ಹಾಸನ: ನಗರದ ಹೊಸಲೈನ್ ರಸ್ತೆಯ ಕಿರಣ್ ಆಸ್ಪತ್ರೆ ಸಮೀಪದಲ್ಲಿರುವ ಅಚೀವರ್ಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಬಾ ಕೌನೈನ್ ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಒಟ್ಟು 600 ಕ್ಕೆ 595 ಅಂಕಗಳನ್ನು ಪಡೆದು ಶೇ.99.1% ಫಲಿತಾಂಶದೊಂದಿಗೆ ಹಾಸನ ಜಿಲ್ಲೆಗೆ ಮೊದಲನೇ ರಾಂಕ್ ಹಾಗೂ ರಾಜ್ಯಕ್ಕೆ 4 ನೇ ರಾಂಕ್ ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ಕಳೆದ ಪರೀಕ್ಷೆಯ ಫಲಿತಾಂಶದಲ್ಲಿ ಸಬಾ ಕೌನೈನ್ ಎಂಬ ಬಾಲಕಿ ಇಂಗ್ಲೀಷ್ 95 ಆಕೌಂಟೆನ್ಸಿ 100 ಕಂಪ್ಯೂಟರ್ ಸೈನ್ಸ್ 100 ಬಿಸಿನೆಸ್ ಸ್ಟಡೀಸ್ 98 ಎಕನಾಮಿಕ್ಸ್ 96 ಉರ್ದು 96 ಅಂಕ ಪಡೆದಿದ್ದು, ಫಲಿತಾಂಶದಲ್ಲಿ ಏರು ಪೇರು ಕಂಡ ಕಾಲೇಜು ಆಡಳಿತ ಮಂಡಳಿ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಮರು ಮೌಲ್ಯಮಾಪನದ ಫಲಿತಾಂಶದಲ್ಲಿ ಇಂಗ್ಲೀಷ್ 95 ಹೊರತು ಪಡಿಸಿ ಇನ್ನೆಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿ ಜಿಲ್ಲೆಗೆ ಮೊದಲನೇ ರಾಂಕ್ ಹಾಗೂ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದಿದ್ದಾರೆ. ನಗರದಲ್ಲಿ ಬಾಳೆ ಹಣ್ಣು ವ್ಯಾಪಾರ ಮಾಡುವ ಸೈಯದ್ ರಫೀಕ್ ಹಾಗೂ ರೋಷಿಹ ನಿಗಾರ್ ರವರ ಸುಪುತ್ರಿಯಾಗಿರುವ ಸಬಾ ಕೌನೈನ್‌ಳ ಈ ಅಭೂತಪೂರ್ವ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು, ಸಿಬ್ಬಂದಿ ಈ ವರ್ಗದವರು, ಪೋಷಕರು ಈ ಮತ್ತು ಶಿಕ್ಷಣ ಅಭಿಮಾನಿಗಳು ಈ ಸಬಾ ಕೌನೈನ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.





