ಜೀನಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ: ಮಾಲಕ ದಿಲೀಪ್ ಕುಮಾರ್ ವಿರುದ್ಧ FIR ದಾಖಲು
ತುಮಕೂರು: ಜೀನಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಜೀನಿ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಕಳ್ಳಂಬೆಳ್ಳ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜಿಲ್ಲೆಯ ಶಿರಾ ತಾಲೂಕಿನ ಯರಗುಂಟೆಯಲ್ಲಿರುವ ಜೀನಿ ಕಂಪನಿಯಲ್ಲಿ ಕೆಲಸಕ್ಕೆ ಬರುವ ಮೇಘನ ಎಂಬಾಕೆಗೆ ದಿಲೀಪ್ ಕುಮಾರ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಏಪ್ರಿಲ್ 19 ರಂದು ಸ್ವಲ್ಪ ಕೆಲಸವಿದೆ ಎಂದು ಜೀನಿ ಕಂಪನಿ ಶೆಡ್ ಗೆ ಕರೆದು ಕೈಹಿಡಿದು ಎಳೆದಾಡಿ ದಿಲೀಪ್ ಕುಮಾರ್ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನನಗೆ ಸಹಕರಿಸು ನಿನ್ನನ್ನು ರಾಣಿಯ ರೀತಿ ನೋಡಿಕೊಳ್ಳುತ್ತೇನೆ ಎಂದು ಆಮಿಷವೊಡ್ಡಿದ್ದಾರೆ. ಒಂದು ವೇಳೆ ಸಹಕರಿಸದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ನೊಂದ ಮಹಿಳೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಏ. 24 ರಂದು ಎಫ್‌ಐಆರ್ ದಾಖಲಾಗಿದೆ.





