ಯುವ ವಕೀಲೆ ಅನುಮಾನಸ್ಪದವಾಗಿ ಸಾವು
ನೆಲಮಂಗಲ: ಯುವ ವಕೀಲೆಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ರಮ್ಯ(27) ಸಾವನ್ನಪ್ಪಿದ ವಕೀಲೆ. ನೆಲಮಂಗಲ ಬಳಿಯ ಶ್ರೀನಿವಾಸಪುರದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಕೀಲೆಯ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವಕೀಲೆ ಮನೆಯಲ್ಲೇ ವಾಸವಿದ್ದ ಪುನೀತ್(22) ಎಂಬ ಯುವಕನೂ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವುಡ್ ವರ್ಕ್ ಕೆಲಸ ಮಾಡ್ಕೊಂಡಿದ್ದ ಪುನೀತ್, ವಕೀಲೆಯ ಮನೆಯಲ್ಲಿ ವಾಸವಿದ್ದ.
ವಕೀಲೆಯ ಮನೆಯಲ್ಲಿ ಸಾಕುಮಗನಂತೆ ಜೀವನ ನಡೆಸುತ್ತಿದ್ದ ಪುನೀತ್, ಆಕೆಯ ಸಾವು ನೋಡಿ ಮನನೊಂದು ನೇಣಿಗೆ ಶರಣಾಗಿದ್ದಾನೆ.





