ಪಾನಿಪುರಿ ತಿಂದು 25 ಮಂದಿಗೆ ಹೊಟ್ಟೆ ನೋವು, ವಾಂತಿ, ಭೇದಿ: ಆಸ್ಪತ್ರೆಗೆ ದಾಖಲು
ತುಮಕೂರು: ಪಾನಿಪುರಿ ತಿಂದು 25 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ತುಮಕೂರು ಜಿಲ್ಲೆಯ ಶಿರಾದ ಬುಕ್ಕಾಪಟ್ಟಣದಲ್ಲಿ ನಡೆದಿದೆ.
ಪಾನಿಪೂರಿ ಅಂಗಡಿಯೊಂದರಲ್ಲಿ ಪಾನಿಪುರಿ ತಿಂದ 25ಕ್ಕೂ ಹೆಚ್ಚು ಮಂದಿಗೆ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿಕೊಂಡಿದೆ.
ಬಳಿಕ ಅವರೆಲ್ಲರೂ ಅಸ್ವಸ್ಥರಾಗಿದ್ದು ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.





