December 15, 2025

ಕಾಸರಗೋಡು: ವಲಸೆ ಕಾರ್ಮಿಕನ ಕೊಲೆ ಪ್ರಕರಣ: ಓರ್ವನ ಬಂಧನ

0
image_editor_output_image611397514-1745481646715.jpg

ಕಾಸರಗೋಡು: ನಗರದ ಆನೆಬಾಗಿಲು ಎಂಬಲ್ಲಿ ಎರಡು ದಿನಗಳ ಹಿಂದೆ ನಡೆದ ವಲಸೆ ಕಾರ್ಮಿಕನ ಕೊಲೆಗೆ ಸಂಬಂಧಪಟ್ಟಂತೆ ಕಾಸರಗೋಡು ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಪಶ್ಚಿಮ ಬಂಗಾಳದ ಸಂಜಿತ್ ರಾಯ್ ( 25) ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ದ ಸುಶಾಂತ್ ರಾಯ್ ( 30) ರವರ ಕೊಲೆಗೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿಗೆ ಆರು ತಿಂಗಳ ಹಿಂದೆ ಕಾಸರಗೋಡಿಗೆ ಬಂದಿದ್ದ ಆರು ಮಂದಿಯ ತಂಡವು ಆನೆಬಾಗಿಲು ಎಂಬಲ್ಲಿ ಕ್ವಾಟರ್ಸ್ ನಲ್ಲಿ ವಾಸವಾಗಿದ್ದು ,ಸೋಮವಾರ ಮುಂಜಾನೆ ಇವರ ನಡುವೆ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ಬಲವಾದ ಪೆಟ್ಟು ಬಿದ್ದುದರಿಂದ ಸುಶಾಂತ್ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!