ವಿಟ್ಲ: ಏಪ್ರಿಲ್ 18: ನಾಳೆ ಡಿ’ ಗ್ರೂಪ್(ರಿ) ವಿಟ್ಲ ವತಿಯಿಂದ ಉಚಿತ ಸುನ್ನತ್(ಮುಂಜಿ) ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ.
ವಿಟ್ಲ: ಡಿ’ ಗ್ರೂಪ್(ರಿ) ವಿಟ್ಲ ಇದರ ವತಿಯಿಂದ ಉಚಿತ ಸುನ್ನತ್(ಮುಂಜಿ) ಕಾರ್ಯಕ್ರಮ ಹಾಗೂ ವಿಟ್ಲ ರೇಂಜ್ ಮಟ್ಟದ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ 18 ಎಪ್ರಿಲ್ ನಾಳೆ ಬೆಳಿಗ್ಗೆ 7 ಘಂಟೆಗೆ ವಿಟ್ಲದ ಬ್ರೈಟ್ ಅಡಿಟೋರಿಯಂ ಹಾಲ್ ನಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮ ಬೆಳಿಗ್ಗೆ 10 ಘಂಟೆಗೆ ಡಿ’ ಗ್ರೂಪ್(ರಿ) ವಿಟ್ಲ ಇದರ ಅಧ್ಯಕ್ಷರಾದ ಶಾಕೀರ್ ಅಳಕೆ ಮಜಲು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಬಹು ಮಹಮ್ಮದ್ ಆರೀಪ್ ಬಾಖವಿ ಖತೀಬರು ಕೇಂದ್ರ ಜುಮಾ ಮಸೀದಿ ವಿಟ್ಲ ಹಾಗೂ ದುವಾ ಬಹು ಅಬ್ಬಾಸ್ ಮದನಿ ಖತೀಬರು ಅಶ್ ಅರೀಯ ಟೌನ್ ಮಸೀದಿ ವಿಟ್ಲ ಇವರು ನೆರವೇರಿಸಿಕೊಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಡಾ। ವಿ.ಕೆ. ಅಬ್ದುಲ್ ಬಶೀರ್ ಚೇರ್ ಮ್ಯಾನ್ ಜನಪ್ರೀಯ ಪೌಂಡೇಶನ್ ಹಾಸನ ಹಾಗೂ ಮಂಗಳೂರು, ಮತ್ತು ಜನಾಬ್ ಎಂ.ಎಸ್. ಮಹಮ್ಮದ್ ಗೌರವಾಧ್ಯಕ್ಷರು ಮುಸ್ಲಿಂ ಒಕ್ಕೂಟ ವಿಟ್ಲ ಇವರುಗಳು ಹಾಗೂ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಮುಂಜಿ ಕಾರ್ಯಕ್ರಮವನ್ನು ಜನಪ್ರೀಯ ಆಸ್ಪತ್ರೆ ಮಂಗಳೂರು ಮತ್ತು ಹಾಸನ ಇದರ ವೈದ್ಯರು ನಡೆಸಿಕೊಡಲಿದ್ದಾರೆ.





