ಚಿಕ್ಕಮಂಗಳೂರಿನ ಮೂಸಾಕ ಇನ್ನಿಲ್ಲ
ಮಂಜೇಶ್ವರ: ಇಲ್ಲಿನ ಮಂಜೇಶ್ವರ ವರ್ಕಾಡಿ ಸುಂಕದಕಟ್ಟೆ ಕುಂಞಪ್ಪ – ಆಯಿಸಮ್ಮ ದಂಪತಿಗಳ ಪ್ರತ್ರ ಚಿಕ್ಕಮಂಗಳೂರಿನ ಕಲ್ದೊಡ್ಡಿ ಶಾಂತಿನಗರದಲ್ಲಿ ವಾಸಿಸುವ ಮೂಸಾಕ(80) ಇಂದು ಅಸೌಖ್ಯದ ನಿಮಿತ್ತ ನಿಧನರಾದರು.
ಕಳೆದ 40 ವರ್ಷಗಳಿಂದ ಚಿಕ್ಕಮಂಗಳೂರಿನ ಕಲ್ದೊಡ್ಡಿ ಶಾಂತಿನಗರ ಸಮೀಪದ ಕಾಪಿ ತೋಟದ ಕಾರ್ಮಿಕಾರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕಳೆದ 40 ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವರ್ಕಾಡಿ ಯಿಂದ ಚಿಕ್ಕಮಂಗಳೂರಿನ ಕಲ್ದೊಡ್ಡಿಗೆ ತಲುಪಿ ಅಲ್ಲಿನ ಕಾಪಿ ತೋಟದ ರೈಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ ಖದೀಜಾ ಮಕ್ಕಳಾದ ಅಬ್ಬು, ಸೂಪಿ, ಬಿ ಪಾತಿಮ್ಮ, ಜೈನಬ, ರಹೀಮ್ ಹಾಗೂ ಸಹೋದರರಾದ ಎಸ್ ಎ ರಹಿಮಾನ್, ಮೋಯಿದಿನ್ ಕುಂಞ, ಉಮ್ಮರ್,ಅಬೂಬಕ್ಕರ್ ಅಬ್ಬಾಸ್, ಖದೀಜ, ಆಯಿಶಾ, ನಬೀಸಾ , ಬಿಪಾತಿಮ್ಮ, ಹನೀಪ್, ಮಹಮ್ಮದ್ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ





