ವಿಟ್ಲ: ಕೊಳ್ನಾಡು ಗ್ರಾಮದ ಮೂವರು ಕಾಂಗ್ರೆಸ್ ಕಾರ್ಯಕರ್ತರ ಉಚ್ಚಾಟನೆ ಆದೇಶ ರದ್ದುಪಡಿಸಿದ ಜಿಲ್ಲಾ ಕಾಂಗ್ರೆಸ್
ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯತಿನ ಮೂವರು ಸದಸ್ಯರುಗಳಾದ ಎಬಿ ಅಬ್ದುಲ್ಲಾ, ರಾಜೇಶ್ ಗೌಡ ಬಾರೆ ಬೆಟ್ಟು, ಮಹಮ್ಮದ್ ಮಂಚಿ, ಎಂಬವರನ್ನು ಇತ್ತೀಚೆಗೆ ಪಕ್ಷ ವಿರೋಧಿ ಚಟುವಟಿಕೆ ಮತ್ತು ಅಶಿಸ್ತಿನ ಕಾರಣದಿಂದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಉಚ್ಛಾಟನೆ ಮಾಡಿದ್ದು, ಇದೀಗ ಉಚ್ಚಾಟನೆಗೆ ಆದೇಶವನನ್ನು ರದ್ದುಗೊಳಿಸಲಾಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಆದೇಶ ರದ್ದು ಮಾಡಿ ಆದೇಶ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ನಿಮ್ಮಿಂದ ಪಕ್ಷದ ಶಿಸ್ತು ಪಾಲನೆಯ ನಿರೀಕ್ಷೆಯಿದ್ದು, ಪಕ್ಷ ಸಂಘಟನೆಯಲ್ಲಿ ಅತ್ಯಂತ ವಿಶ್ವಾಸದಿಂದ ತೊಡಗಿಸಿಕೊಂಡು ಪಕ್ಷದ ಅಭಿವೃದ್ಧಿಗೆ ಶ್ರಮಿಸುವಂತೆ ಈ ಕೂಡಲೇ ಪಕ್ಷಕ್ಕಾಗಿ ದುಡಿಯುವಂತೆ ಆದೇಶ ಹೊರಡಿಸಿದೆ.





