ಉಪ್ಪಿನಂಗಡಿ: ಜೋಗಿಬೆಟ್ಟು ರಿಫಾಯಿ ಮಸೀದಿಯಲ್ಲಿ ಏಪ್ರಿಲ್ 17ರಿಂದ 19ರ ವರೆಗೆ 2 ದಿನಗಳ ಧಾರ್ಮಿಕ ಪ್ರವಚನ ಮತ್ತು ರಿಫಾಯಿ ರಾತೀಬ್ ಮಜ್ಲಿಸ್

ಉಪ್ಪಿನಂಗಡಿ: ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ವತಿಯಿಂದ ತಾಜುಲ್ ಆರಿಫೀನ್ ಅಶೈಕ್ ಆಹ್ ಮದುಲ್ ಕಬೀರ್ ರಿಫಾಯಿ ತಂಙಳ್ ಅವರ ಸ್ಮರಣಾರ್ಥ 10ನೇ ವಾರ್ಷಿಕ ಪ್ರಯುಕ್ತ 2 ದಿನಗಳ ಧಾರ್ಮಿಕ ಮತ ಪ್ರವಚನ ಮತ್ತು ರಿಫಾಯಿಯ ರಾತೀಬ್ ಮಜ್ಲಿಸ್ ಏಪ್ರಿಲ್ 17, 18 ಮತ್ತು 19ರಂದು ನಡೆಯಲಿದೆ.
ಏಪ್ರಿಲ್ 17ರಂದು ಶೌಕತ್ ಅಲಿ ವೆಳ್ಳಮುಂಡ ವಯನಾಡ್ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಏ. 18ರಂದು ಸಿ.ಕೆ ರಾಶಿದ್ ಬುಖಾರಿ ಪ್ರಭಾಷಣ ಮಾಡಲಿದ್ದಾರೆ.
ಏಪ್ರಿಲ್ 19ರಂದು ರಿಫಾಯಿ ರಾತೀಬ್ ನಡೆಯಲಿದ್ದು, ನೂರುಲ್ ಜಲಾಲಿಯ ಅಲ್ ಹಾಜ್ ಅಸಯ್ಯದ್ ಕೆ.ಎಸ್ ಮುಹಮ್ಮದ್ ಆಟಕೋಯ ತಂಙಳ್ ಕುಂಬೋಳ್ ದುವಾಃ ಆಶೀರ್ವಚನ ನೀಡಲಿದ್ದು, ಸಯ್ಯದ್ ಕೆ.ಎಸ್ ಅಹಮ್ಮದ್ ಮುಖ್ಯಾರ್ ತಂಙಳ್ ಕುಂಬೋಳ್ ರಿಫಾಯಿ ರಾತೀಬ್ ಗೆ ನೇತೃತ್ವ ನೀಡಲಿದ್ದಾರೆ. ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಖತೀಬ್ ಅಲ್ ಹಾಜ್ ಯು.ಕೆ ಖಲಂದರ್ ಮದನಿ ಉದ್ಘಾಟಿಸಲಿದ್ದಾರೆ ಕಾರ್ಯಕ್ರಮದಲ್ಲಿ ಇನ್ನಿತರ ಉಲಮಾ, ಉಮಾರಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.