ಸುಳ್ಯ: ಫೆವಿಕಲ್ ಗಮ್ ಸೇವನೆ ಮಾಡುತ್ತಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಸುಳ್ಯ: ಜಯನಗರದ ಮನೆಯೊಂದರಲ್ಲಿ ಸುಮಾರು 9, 10, ವರ್ಷದ ಮೂವರು ಬಾಲಕರು ಫೆವಿಕಲ್ ಗಮ್ ಸೇವನೆ ಮಾಡುತ್ತಿದ್ದ ಸಂದರ್ಭ ಸ್ಥಳಿಯರು ಬಾಲಕರನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ನಿನ್ನೆ ವರದಿಯಾಗಿದೆ.
ಬಾಲಕರನ್ನು ವಿಚಾರಣೆ ಮಾಡಿದ ಪೊಲೀಸರು, ಪೋಷಕರನ್ನು ಕರೆಸಿ ಬಾಲಕರಿಗೆ ಎಚ್ಚರಿಕೆ ನೀಡಿ ತಿಳಿಹೇಳಿ ಕಳಿಸಿರುವುದಾಗಿ ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಸಣ್ಣ ಪುಟ್ಟ ಮಕ್ಕಳು ಈ ವ್ಯಸನಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಪ್ರತ್ಯೇಕ ಗಮನ ವಹಿಸಬೇಕಾಗಿದೆ.