ಸುಳ್ಯ: ಓವರ್ ಟೇಕ್ ಬರದಲ್ಲಿ ರಿಕ್ಷಾಗೆ ಢಿಕ್ಕಿ ಹೊಡೆದ ಕಾರು:
ರಿಕ್ಷಾ ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು
ಸುಳ್ಯ: ಬಸ್ಸೊಂದನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿ ಕಾರು ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದು ರಿಕ್ಷಾ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ಜಾಲ್ಸೂರು ಗ್ರಾಮದ ಕಾಳಮ್ಮನೆಯಲ್ಲಿ ಡಿ.21ರಂದು ಸಂಭವಿಸಿದೆ.

ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು, ಅತೀ ವೇಗವಾಗಿ ಬಂದು ಬಸ್ಸೊಂದನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿ ಪೈಚಾರಿನಿಂದ ಜಾಲ್ಸೂರಿಗೆ ತೆರಳಿತ್ತಿದ್ದ ಅಟೋರಿಕ್ಷಾ ಕ್ಕೆ ಢಿಕ್ಕಿ ಹೊಡೆಯಿತು.
ಪರಿಣಾಮವಾಗಿ ರಿಕ್ಷಾ ಪಲ್ಟಿಯಾಗಿದ್ದು, ರಿಕ್ಷಾ ಪ್ರಯಾಣಿಕರುಗಳಾದ ಪೈಚಾರಿನ ಉಮೇಶ್ ಗೌಡ ಹಾಗೂ ರಾಘವೇಂದ್ರ ಎಂಬವರು ಗಾಯಗೊಂಡರು. ತಕ್ಷಣ ಅವರಿಬ್ಬರನ್ನು ಸ್ಥಳೀಯರು ಸೇರಿ ಇನ್ನೊಂದು ಅಟೋರಿಕ್ಷಾದ ಮೂಲಕ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದರೆನ್ನಲಾಗಿದೆ.
ಗಾಯಾಳುಗಳ ಪೈಕಿ ಪೈಚಾರಿನ ಆರ್ತಾಜೆ ಉಮೇಶ್ ಗೌಡರ ಭುಜ ಹಾಗೂ ಕೈಗೆ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.





