December 15, 2025

ವಿಟ್ಲ; ಮದರಸ ಪ್ರಾರಂಭೋತ್ಸವ

0
image_editor_output_image1706532304-1744130627562

ವಿಟ್ಲ; ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಪ್ರಕಟಗೊಂಡರೆ ಮಾತ್ರ ಆತ ಇತರರಿಗೆ ಉಪಕಾರಿ ಯಾಗುತ್ತಾನೆ. ಆಧ್ಯಾತ್ಮಿಕವಾಗಿ ಜೀವನ ಸಾಗಿಸಲು ಸಾಧ್ಯವಾದರೆ ಜೀವನ ಸಾರ್ಥಕವಾಗುತ್ತದೆ. ಇಂತಹ ಮೌಲ್ಯಯುತ ಶಿಕ್ಷಣ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಎಳೆಯ ವಯಸ್ಸಿನಿಂದಲೇ ಮಕ್ಕಳ ಹೃದಯಗಳಲ್ಲಿ ನೆಲೆಯೂರಲು ಮದರಸಗಳು ಕಾಲಕ್ಕನುಸಾರವಾದ ನವೀನ ಪಠ್ಯ ಪದ್ಧತಿಗಳೊಂದಿಗೆ ಜನಮನಸುಗಳಲ್ಲಿ ಪ್ರಭಾವ ಬೀರುತ್ತಿದೆ ಎಂದು ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಹೇಳಿದರು. ಅವರು ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಮೇಗಿನಪೇಟೆ  ಹಯಾತುಲ್ ಇಸ್ಲಾಂ ಮದರಸದಲ್ಲಿ ರೇಂಜ್ ಮಟ್ಟದ ಮದರಸ ಪ್ರಾರಂಭೋತ್ಸವ ಕಾರ್ಯಕ್ರಮದ   ಮುಖ್ಯ ಅತಿಥಿಯಾಗಿ ಮಾತನಾಡುತ್ತಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದರಸ ಅಧ್ಯಕ್ಷ ಶಮೀರ್ ಪಳಿಕೆ ವಹಿಸಿದ್ದರು ಹಸೈನಾರ್ ಫೈಝಿ ಉದ್ಘಾಟಿಸಿದರು.
ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಬಿ.ಎಂ.ಅಬ್ದುಲ್ ಖಾದರ್,ಝುಬೈರ್ ಮಾಸ್ಟರ್, ಅಬ್ದುಲ್ ಹಮೀದ್ ಬದ್ರಿಯಾ, ಇಕ್ಬಾಲ್ ಶೀತಲ್ ಅಬೂಬಕರ್ ಮದನಿ,ಹಾಜಿ ಹಕೀಂ ಅರ್ಷದಿ,ಇಸ್ಮಾಯಿಲ್ ಮದನಿ ರಹೀಂ ಪಳಿಕೆ ಶಮೀರ್ ಪೊನ್ನೋಟು ಮುಂತಾದವರು ಉಪಸ್ಥಿತರಿದ್ದರು
ಸದರ್ ಉಸ್ತಾದ್ ಅಬ್ದುಲ್ಲ ದಾರಿಮಿ ಸ್ವಾಗತಿಸಿದರು
ಶಫೀಕ್ ಅಝ್ಹರಿ  ವಂದಿಸಿದರು.

Leave a Reply

Your email address will not be published. Required fields are marked *

error: Content is protected !!