ವಿಟ್ಲ: ಪಿಯುಸಿ ಫಲಿತಾಂಶ: ವಿಠಲ ಪದವಿ ಪೂರ್ವ ಕಾಲೇಜ್ ಗೆ ಶೇ.86 ಫಲಿತಾಂಶ
ವಿಟ್ಲ: 2025 ನೇ ಸಾಲಿನ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ವಿಠಲ ಪದವಿಪೂರ್ವ ಕಾಲೇಜಿನ 301 ವಿದ್ಯಾರ್ಥಿಗಳು ಹಾಜರಾಗಿದ್ದು, 31 ವಿಶಿಷ್ಟ ಶ್ರೇಣಿಯಲ್ಲಿ, 152 ಪ್ರಥಮ ಶ್ರೇಣಿಯಲ್ಲಿ ಹಾಗೂ 63 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಒಟ್ಟು 86.7% ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಕುಮಾರಿ ಯಜ್ಞಶ್ರೀ 587, ವಾಣಿಜ್ಯ ವಿಭಾಗದಲ್ಲಿ ಕುಮಾರಿ ಕೀರ್ತಿ ಶೆಟ್ಟಿ ಕೆ 561 ಮತ್ತು ಕಲಾ ವಿಭಾಗದಲ್ಲಿ ಕುಮಾರಿ ತಸ್ಲೀಯ 547 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿ ಕೀರ್ತಿ ತಂದಿರುತ್ತಾರೆ.. ಉತ್ತಮ ಫಲಿತಾಂಶ ದಾಖಲಿಸುವಲ್ಲಿ ಶ್ರಮಿಸಿದ ಎಲ್ಲಾ ಉಪನ್ಯಾಸಕರನ್ನು, ಕೀರ್ತಿ ತಂದ ವಿದ್ಯಾರ್ಥಿಗಳನ್ನು ವಿಠಲ ಎಜುಕೇಶನ್ ಸೊಸೈಟಿಯು ಅಭಿನಂದಿಸಿದೆ..


