ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜು91.30 ಶೇ. ಒಟ್ಟು ಫಲಿತಾಂಶ ದಾಖಲು
ಅಡ್ಯನಡ್ಕ: ಜನತಾ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ 2025 ಮಾರ್ಚ್ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು ಶೇಕಡಾ 91.30 ಫಲಿತಾಂಶ ಪಡೆದುಕೊಂಡಿದೆ.
ಒಟ್ಟು 92 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇವರಲ್ಲಿ 84 ಮಂದಿ ಉತ್ತೀರ್ಣರಾಗಿದ್ದಾರೆ. 11 ಮಂದಿ ಡಿಸ್ಟಿಂಕ್ಷನ್, 48 ಮಂದಿ ಪ್ರಥಮ ಶ್ರೇಣಿ ಹಾಗೂ 23 ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ. ಮೊಹಮ್ಮದ್ ಅಫ್ಲಾ ಕೆ., ವಿಜ್ಞಾನ ವಿಭಾಗ ಅವರು 566 (94.33 ಶೇ.) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕನ್ನಡ, ಹಿಂದಿ, ಗಣಿತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ ವಿಷಯಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.





