March 8, 2026

ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ ವಸತಿ ಕಟ್ಟಡಕ್ಕೆ ರಷ್ಯಾದ ಕ್ಷಿಪಣಿ ದಾಳಿ: ಇಬ್ಬರು ಮಕ್ಕಳು ಸೇರಿದಂತೆ 8 ಜನರು ಸಾವು

0
image_editor_output_image-1838231172-1772926447806.jpg

ಕೀವ್: ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿರುವ ಐದು ಅಂತಸ್ತಿನ ವಸತಿ ಕಟ್ಟಡಕ್ಕೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.

ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ದಾಳಿಯನ್ನು ಖಂಡಿಸಿದ್ದಾರೆ. ರಷ್ಯಾ 29 ಕ್ಷಿಪಣಿಗಳು ಮತ್ತು 480 ಡ್ರೋನ್‌ಗಳೊಂದಿಗೆ ರಾತ್ರೋರಾತ್ರಿ ಉಕ್ರೇನ್ ಮೇಲೆ ದಾಳಿ ಮಾಡಿದೆ. ಕೀವ್ ಮತ್ತು ಇತರ ಮಧ್ಯ ಪ್ರದೇಶಗಳಲ್ಲಿನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆ. ದೇಶಾದ್ಯಂತ ಏಳು ಸ್ಥಳಗಳಲ್ಲಿ ಹಾನಿಯಾಗಿದೆ

ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನೆರೆ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸುತ್ತೇನೆ: ಇರಾನ್‌ ಅಧ್ಯಕ್ಷ ಮಸೌದ್‌
ಏರ್‌ ಡಿಫೆನ್ಸ್‌ ಸಿಸ್ಟಮ್‌ 19 ಕ್ಷಿಪಣಿಗಳು ಮತ್ತು 453 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದು, 22 ಸ್ಥಳಗಳಲ್ಲಿ ಒಂಬತ್ತು ಕ್ಷಿಪಣಿಗಳು ಮತ್ತು 26 ಸ್ಟ್ರೈಕ್ ಡ್ರೋನ್‌ಗಳಿಂದ ದಾಳಿಗಳು ದಾಖಲಾಗಿವೆ.

ಪ್ರಾಥಮಿಕ ಶಾಲಾ ಶಿಕ್ಷಕಿ ಮತ್ತು ಅವರ ಮಗ, ಎರಡನೇ ತರಗತಿಯ ವಿದ್ಯಾರ್ಥಿನಿ ಅವರ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಎಂಟನೇ ತರಗತಿಯ ವಿದ್ಯಾರ್ಥಿನಿ ಕೂಡ ತನ್ನ ತಾಯಿಯೊಂದಿಗೆ ಸಾವನ್ನಪ್ಪಿದ್ದಾರೆ ಎಂದು ನಗರದ ಮೇಯರ್ ಇಹೋರ್ ಟೆರೆಖೋವ್ ತಿಳಿಸಿದ್ದಾರೆ. ಇದನ್ನೂ ಓದಿ: ದುಬೈ ವಿಮಾನ ನಿಲ್ದಾಣದ ಮೇಲೆಯೇ ಇರಾನ್‌ ಡ್ರೋನ್‌ ದಾಳಿ

ಇಜ್ಡೆಲಿಯೆ-30 ಎಂಬ ಹೊಸ ರಷ್ಯಾದ ಕ್ರೂಸ್ ಕ್ಷಿಪಣಿ ಕಟ್ಟಡವನ್ನು ಹೊಡೆದಿದೆ ಎಂದು ಪ್ರಾದೇಶಿಕ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. ರಷ್ಯಾದ ರಕ್ಷಣಾ ಸಚಿವಾಲಯವು, ದಾಳಿಯು ಉಕ್ರೇನಿಯನ್ ಮಿಲಿಟರಿ ನೆಲೆಗಳು, ಇಂಧನ ಸೌಲಭ್ಯಗಳು ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!