March 8, 2026

ದುಬೈ: ಬರ್ಷಾ ಪ್ರದೇಶದಲ್ಲಿ ವೈಮಾನಿಕ ದಾಳಿ: ದಾಳಿಯ ಅವಶೇಷಗಳು ವಾಹನದ ಮೇಲೆ ಬಿದ್ದು ಓರ್ವ ವ್ಯಕ್ತಿ ಮೃತ್ಯು

0
image_editor_output_image2146679681-1772927647579.jpg

ದುಬೈ: ನಗರದ ಬರ್ಷಾ ಪ್ರದೇಶದಲ್ಲಿ ವೈಮಾನಿಕ ದಾಳಿಯ ಅವಶೇಷಗಳು ವಾಹನದ ಮೇಲೆ ಬಿದ್ದ ಪರಿಣಾಮ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಅವಶೇಷಗಳು ವಾಹನದ ಮೇಲೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ದುಬೈ ಮರೀನಾ ಪ್ರದೇಶದಲ್ಲಿರುವ ಗೋಪುರಗಳಲ್ಲಿ ಒಂದರ ಮುಂಭಾಗಕ್ಕೂ ದಾಳಿಯ ಅವಶೇಷಗಳು ಬಿದ್ದ ಘಟನೆ ನಡೆದಿದೆ. ಈ ಘಟನೆಯನ್ನು ಅಧಿಕಾರಿಗಳು ಯಶಸ್ವಿಯಾಗಿ ನಿಭಾಯಿಸಿದ್ದು, ಇದು ವೈಮಾನಿಕ ದಾಳಿಯ ಪರಿಣಾಮವಾಗಿರಬಹುದು ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!