March 22, 2026

ಶಾಲಾ ವಾಟ್ಸ್ಯಾಪ್ ಗ್ರೂಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಶಿಕ್ಷಕ: ಬಂಧನ

0
938d6227efb9b05e2832b18c36bdd015_original.jfif_.jpg

ಚೆನ್ನೈ: ವಿದ್ಯಾರ್ಥಿಗಳು, ಶಿಕ್ಷಕರನ್ನೊಳಗೊಂಡ ವಾಟ್ಸ್‌ಯಪ್‌ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ಶೇರ್ ಮಾಡಿದ ಖಾಸಗಿ ಶಾಲಾ ಶಿಕ್ಷಕರೊಬ್ಬರನ್ನು ತಮಿಳುನಾಡಿನ ಚೆನ್ನೈಯಲ್ಲಿ ಬಂಧಿಸಲಾಗಿದೆ.

ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ ಮಾಡಲು ಬಳಸುವ ವಾಟ್ಸ್‌ಯಪ್ ಗ್ರೂಪ್‌ನಲ್ಲಿ ಗಣಿತ ಶಿಕ್ಷಕ ಮತಿವಣ್ಣನ್ ಶುಕ್ರವಾರ ರಾತ್ರಿ ಅಶ್ಲೀಲ ವಿಡಿಯೊಗಳನ್ನು ಅಪ್ಲೋಡ್ ಮಾಡಿದ್ದರು.

ಇದನ್ನು ನೋಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಂಗಾಗಿದ್ದು, ಶಾಲೆಯ ಆಡಳಿತಕ್ಕೆ ಮಾಹಿತಿ ನೀಡಿದ್ದರು.

ವಿಡಿಯೊದ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದೂ ಮದ್ಯಪಾನ ಮಾಡಿದ ಅಮಲಿನಲ್ಲಿ ಅವುಗಳನ್ನು ವಾಟ್ಸ್‌ಯಪ್‌ ಗ್ರೂಪ್‌ನಲ್ಲಿ ಶೇರ್ ಮಾಡಿದ್ದೆ ಎಂದೂ ಶಾಲೆಯ ಆಂತರಿಕ ತನಿಖೆ ವೇಳೆ ಮತಿವಣ್ಣನ್ ತಿಳಿಸಿದ್ದಾರೆ.

ಶಾಲಾ ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ಅವರನ್ನು ಬಂಧಿಸಿ ಪೋಕ್ಸೊ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಅವರನ್ನು ಚೀಫ್ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಲಾಗಿದೆ. ಸದ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚೆನ್ನೈಯ ಖಾಸಗಿ ಶಾಲೆಯೊಂದರಲ್ಲಿ ಒಂದು ದಶಕದಿಂದ ಗಣಿತ ಶಿಕ್ಷಕರಾಗಿರುವ ಮತಿವಣ್ಣನ್, ಪತ್ನಿ ಹಾಗೂ ಮಕ್ಕಳ ಜತೆ ಅಂಬತ್ತೂರು ನಗರದಲ್ಲಿ ವಾಸವಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!