ಚಿಕ್ಕಮಗಳೂರು: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ

ಚಿಕ್ಕಮಗಳೂರು: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಮಮತಾ ಮೃತ ದುರ್ದೈವಿ. 4 ವರ್ಷದ ಹಿಂದೆ ಮದುವೆಯಾದ್ದ ಮಮತಾಗೆ ಮದುವೆ ವೇಳೆ 110 ಗ್ರಾಂ ಚಿನ್ನ ನೀಡಿ ಪೋಷಕರು ಮದುವೆ ಮಾಡಿಸಿ ಕೊಟ್ಟಿದ್ದರು.
ಮದುವೆಯ ಬಳಿಕ ಹೆಚ್ಚಿನ ಹಣ ಕೊಡುವಂತೆ ಗಂಡನ ಮನೆಯವರು ಮಮತಾಳಿಗೆ ಮಾನಸಿಕ-ದೈಹಿಕ ಕಿರುಕುಳ ನೀಡ್ದಿದಾರೆ ಎನ್ನಲಾಗಿದೆ, ಹಿಂಸೆ ತಾಳಲಾರದೆ ಮಮತಾ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದರು ಎನ್ನಲಾಗಿದೆ ಈ ನಡುವೆ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯತಿ ಮೂಲಕ ಮತ್ತೆ ಗಂಡನ ಮನೆ ಸೇರಿದ್ದರು.
ಕಳೆದ ವರ್ಷ ತೋಟದ ನಿರ್ವಹಣೆಗೆಂದು ಮಮತಾ ಪತಿ ಅವಿನಾಶ್ ಮಮತಾ ಪೋಷಕರಿಂದ 50 ಸಾವಿರ ಪಡೆದುಕೊಂಡಿದ್ದ ಇದಾದ ಬಳಿಕ ಜನವರಿ 25ರಂದು ಮಮತಾಗೆ ಪಿಡ್ಸ್ ಬಂದಿದೆ ಎಂದು ಗಂಡ ಅವಿನಾಶ್ ಆಸ್ಪತ್ರೆಗೆ ಸೇರಿಸಿದ್ದ.
ಆದರೆ ಅವಿನಾಶ್ ಚಿಕ್ಕಪ್ಪ ಮಮತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಮಮತಾ ಪೋಷಕರಲ್ಲಿ ಹೇಳಿಕೆ ನೀಡಿದ್ದಾರೆ. ಎರಡು ತಿಂಗಳಿಂದ ಫಾದರ್ ಮುಲ್ಲರ್, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದ ಗಂಡನ ಮನೆಯವರು ಆಕೆ ಹುಷಾರಾಗುವ ಮುನ್ನವೇ ಮನೆಗೆ ಕರೆದುಕೊಂಡು ಬಂದಿದ್ದು ಇದಾದ ಕೆಲ ದಿನದಲ್ಲೇ ಮಮತಾ ಕೊನೆಯುಸಿರು ಎಳೆದಿದ್ದಾರೆ.