ಮಂಗಳೂರು: ಅರಫಾ ಬಸ್ ಮಾಲಕ, ಉಪ್ಪಿನಂಗಡಿಯ ಉದ್ಯಮಿ ನಿಧನ

ಮಂಗಳೂರು : ಅರಫಾ ಬಸ್ ಮಾಲೀಕ ಖ್ಯಾತ ಉದ್ಯಮಿ ಉಪ್ಪಿನಂಗಡಿಯ ನೆಕ್ಕಿಲಾಡಿ ನಿವಾಸಿ ಸಿದ್ದೀಕ್ ಹಾಜಿ ಅರಫಾ ಮಾ.27ರಂದು ನಿಧನರಾಗಿದ್ದಾರೆ.
ಅರಫಾ ಬಸ್ ಮಾಲೀಕರಾಗಿದ್ದ ಸಿದ್ದೀಕ್ ಹಾಜಿ ಅರಫಾ ವಿದ್ಯಾಕೇಂದ್ರದ ಸ್ಥಾಪಕ. ಉಮರುಲ್ ಫಾರೂಖ್ ಜುಮಾ ಮಸ್ಟಿದ್ ನೆಕ್ಕಿಲಾಡಿ ಇದರ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಿದ್ದೀಕ್ ಹಾಜಿ ಅಲ್ಪಕಾಲದ ಅಸೌಖ್ಯದ ಹಿನ್ನೆಲೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಆರು ಮಂದಿ ಪುತ್ರರನ್ನು ಅಗಲಿದ್ದಾರೆ.