ಕುಂಬಳೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಟೋ ರಿಕ್ಷಾ -ಕಾರು ಡಿಕ್ಕಿ: 4 ಮಂದಿಗೆ ಗಂಭೀರ ಗಾಯ

ಮಂಜೇಶ್ವರ: ಇಲ್ಲಿನ ಕುಂಬಳೆ ಶಿರಿಯ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಹಾಗೂ ಅಟೋ ರಿಕ್ಷಾ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಘಟನೆಯಲ್ಲಿ 4 ಮಂದಿಗೆ ಗಂಭೀರ ಗಾಯಗಳುಂಟಾಗಿದೆ. ಅಟೊ ರಿಕ್ಷಾದಲ್ಲಿ ಶಿರಿಯಾ ನಿವಾಸಿ ಶುಹೈಬಾ (30) ಮಕ್ಕಳಾದ ಜನ್ನ (30) ಅಯಾನ್ (3) ಶುಹೈಬ್ (21) ಎಂಬವರನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ
ಕಾರಲ್ಲಿ ಸಂಚರಿಸುತ್ತಿದ್ದ ಚೆರುವತ್ತೂರು ನಿವಾಸಿಗಳಾದ ವಿಲಾಸಿನಿ (59) ಉಣಿ ಕೃಷ್ಣನ್ (63) ಸುರೇಶ್ ಬಾಬು (43) ಸಹಿತ ನಾಲ್ಕು ಮಂದಿಯನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.