ವಿಟ್ಲ: ಖಾಸಗಿ ಬಸ್ ನಿಲ್ದಾಣದ ಬಳಿ “AVA” ಟೆಕ್ಸ್‌ಟೈಲ್ಸ್ ಹಾಗೂ ರೆಡಿಮಡ್ ಮಳಿಗೆ ಶುಭಾರಂಭ

ವಿಟ್ಲ: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯ ಹೀರಾ ಟವರ್ಸ್ ನಲ್ಲಿ “AVA” ಟೆಕ್ಸ್‌ಟೈಲ್ಸ್ ಹಾಗೂ ರೆಡಿಮೆಡ್ ನ ಮಳಿಗೆ ಶುಭಾರಂಭಗೊಂಡಿತು.
ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಮಳಿಗೆಯನ್ನು ಉದ್ಘಾಟಿಸಿದರು. ಹಾಜಿ ಅಬ್ದುಲ್ ಹಕೀಂ ಅರ್ಷದಿ ದುವಾ ನೆರವೇರಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಇಬ್ರಾಹಿಂ, ಅಬೂಬಕರ್ ಮಾರ್ಣಮಿಗುಡ್ಡೆ ಮುಂತಾದವರು ಶುಭ ಹಾರೈಸಿದರು.
ಇಲ್ಲಿ ಮಹಿಳೆಯರ ಎಲ್ಲಾ ವಿಧದ ಸಿದ್ದ ಉಡುಪುಗಳು, ಫೀಸ್ ಗಳು ಮಿತವಾದ ಆಕರ್ಷಣೀಯ ದರದಲ್ಲಿ ದೊರೆಯುತ್ತವೆ ಎಂದು ಮಾಲಕ ಸತ್ತಾರ್ ತಿಳಿಸಿದ್ದಾರೆ.