ಘಾಟ್‌ನಲ್ಲಿ 3 KSRTC ಬಸ್, 3 ಲಾರಿ, ಬೈಕ್, ಕಂಟೇನರ್ ವಾಹನದ ನಡುವೆ ಸರಣಿ ಅಪಘಾತ

ಬೆಳಗಾವಿ: ಹಿರೇಬಾಗೇವಾಡಿ ಬಳಿಯ ಕಮಕಾರಟ್ಟಿ ಘಾಟ್‌ನಲ್ಲಿ ಸರಣಿ ಅಪಘಾತ ನಡೆದಿದ್ದು ಭಾರೀ ಅನಾಹುತ ತಪ್ಪಿದೆ.
ಮೂರು ಕೆಎಸ್‌ಆರ್‌ಟಿಸಿ ಬಸ್, ಮೂರು ಲಾರಿ, ಒಂದು ಬೈಕ್ ಹಾಗೂ ಕಂಟೇನರ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ಮೊದಲು ನಿಯಂತ್ರಣ ತಪ್ಪಿ ಕಂಟೇನರ್ ವಾಹನ ಪಲ್ಟಿಯಾಗಿದೆ. ಕಂಟೇನರ್ ಡಿಕ್ಕಿ ಆಗುತ್ತದೆ ಎಂದು ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ.