ಚಿಕ್ಕಮಗಳೂರು: ಮಳೆಗೆ ರಸ್ತೆಗೆ ಬಿದ್ದ ಮರ: ಕಳಸ – ಮೂಡಿಗೆರೆ ಮಾರ್ಗದ ಸಂಚಾರ ಬಂದ್

ಚಿಕ್ಕಮಗಳೂರು: ರಾಜ್ಯದ ಹಲವೆಡೆ ಬೇಸಿಗೆ ಮಳೆ ಅಬ್ಬರಿಸ್ತಾ ಇದೆ. ಮಳೆಯಿಂದಾಗಿ ರಾಜ್ಯದ ಹಲವೆಡೆ ನಾನಾ ಅವಂತರ ಆಗಿದೆ. ಚಿಕ್ಕಮಗಳೂರಿನಲ್ಲಿ ಮಳೆಯಾರ್ಭಟಕ್ಕೆ ಮರ ಬಿದ್ದು ಕಳಸ – ಮೂಡಿಗೆರೆ ಮಾರ್ಗದ ಸಂಚಾರ ಬಂದ್ ಆಗಿದೆ.
ಮೂಡಿಗೆರೆಯ ತರುವೆ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಯುವಾಗಲೇ ಭಾರೀ ಗಾಳಿಗೆ ಗ್ರಂಥಾಲಯ ನಿರ್ಮಾಣಕ್ಕಾಗಿ ಇಟ್ಟಿದ್ದ ಮರದ ರ‍್ಯಾಕ್ ಬಿದ್ದಿದೆ. ಪಂಚಾಯತಿ ಅಧ್ಯಕ್ಷೆ ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ಲಾಸ್ಟಿಕ್ ಚೇರ್‌ಗಳು ಮುರಿದಿವೆ. ಶೃಂಗೇರಿ ತಾಲೂಕಿನಲ್ಲಿಯೂ ವರ್ಷಧಾರೆಯಗಿದೆ.