ವಿಟ್ಲ: ಕೇರಳದ ಮಲಬಾರ್ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಕಾರು

ವಿಟ್ಲ: ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಏಕಾಏಕಿ ನಿಂತ ಕೇರಳ ಸರ್ಕಾರಿ ಬಸ್ ಬಗ್ಗೆ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದಿದೆ.
ವಿಟ್ಲ ಪೇಟೆಯ ಕಡೆಯಿಂದ ಕಾಸರಗೋಡು ಕಡೆಗೆ ಹೊರಟಿದ್ದ ಬಸ್ ಗೆ ಕಾರು ಡಿಕ್ಕಿಯಾಗಿದ್ದು, ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಅಪಘಾತದ ಬಳಿಕ ಬಸ್ ರಸ್ತೆಯಲ್ಲೇ ಬಾಕಿಯಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೇರಳ ಸಾರಿಗೆ ಇಲಾಖೆಯ ಗಮನಕ್ಕೆ ತಂದರೂ, ಚಾಲಕರು ಬಸ್ಸನ್ನು ನಿಲ್ದಾಣದ ಒಳಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿಲ್ಲ. ಸರ್ಕಾರಿ ಬಸ್ ನಿಲ್ದಾಣದ ಒಳಗೆ ಬಸ್ ಹೋಗದೇ ರಸ್ತೆಯಲ್ಲೇ ನಿಲ್ಲುತ್ತಿರುವುದು ಘಟನೆಗೆ ಕಾರಣ ಎನ್ನಲಾಗಿದೆ.