ಬೆಳ್ತಂಗಡಿ: ಕೊಡೋಳುಕೆರೆ ಕಾಡಿನಲ್ಲಿ 4 ತಿಂಗಳ ಮಗುವನ್ನು ಬಿಟ್ಟು ಹೋದ ಪೋಷಕರು

ಬೆಳ್ತಂಗಡಿ: ಬೆಳಾಲು ಕೊಡೋಳುಕೆರೆ ಎಂಬಲ್ಲಿ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕಾಡಿನ ಮಧ್ಯೆ ಬಿಟ್ಟು ಹೋಗಲಾಗಿದೆ.
ಬೆಳಾಲು ಗ್ರಾ.ಪಂ. ವ್ಯಾಪ್ತಿಯ ಮುಂಡ್ರೊಟ್ಟು ರಸ್ತೆಯ ಕೊಡೋಳುಕೆರೆ ಕಾಡಿನಲ್ಲಿ ಮಗುವೊಂದು ಅಳುವ ಶಬ್ಧ ದಾರಿಹೋಕ ಮಹಿಳೆಗೆ ಕೇಳಿದ್ದು, ತಕ್ಷಣ ಅವರು ಮಗುವನ್ನು ಕಂಡು ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆ. ಹಸುಗೂಸು ಆರೋಗ್ಯಕರವಾಗಿದೆ ಎಂದು ತಿಳಿದುಬಂದಿದೆ.