ಪ್ರಜ್ವಲ್, ರೇವಣ್ಣ ಸೇರಿ 48 ಮುಖಂಡರ ಹನಿಟ್ರ್ಯಾಪ್ ಪೆನ್‌ಡ್ರೈವ್ ಮಾಡಿದ್ದಾರೆ: ಸಚಿವ ರಾಜಣ್ಣ ಗಂಭೀರ ಆರೋಪ

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ, ಪ್ರಜ್ವಲ್ ರೇವಣ್ಣ ಸೇರಿ 48 ಮುಖಂಡರ ವಿರುದ್ಧ ಪೆನ್‌ಡ್ರೈವ್ ತಯಾರು ಮಾಡಲಾಗಿದೆ. ಇದರಲ್ಲಿ ಬೇರೆ ರಾಜ್ಯದ ಸಚಿವರು, ಜಡ್ಜ್‌ಗಳು ಇದ್ದಾರೆ. ಇಂತಹ ಬ್ಲ್ಯಾಕ್‌ಮೇಲ್ ಸಂಪೂರ್ಣ ಅಂತ್ಯವಾಗಬೇಕು. ಅದಕ್ಕಾಗಿ ಈ ಪ್ರಕರಣ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಸಚಿವ ಕೆ.ಎನ್ ರಾಜಣ್ಣ ಆಗ್ರಹಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಯತ್ನಾಳ್ ಅವರು ನನ್ನ ಹೆಸರು ನಿರ್ಧಿಷ್ಟವಾಗಿ ತೆಗೆದುಕೊಂಡರು, ಅದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಹಾಸನದ ರೇವಣ್ಣ ಇರಬಹುದು, ಪ್ರಜ್ವಲ್ ರೇವಣ್ಣ ಇರಬಹುದು. ಹಾಗೇ ಮಾಜಿ ಶಾಸಕರ ಪೆನ್ ಡ್ರೈವ್ ಸೇರಿದಂತೆ ಅಶ್ಲೀಲ ಪೆನ್‌ಡ್ರೈವ್‌ಗಳನ್ನ ತಯಾರು ಮಾಡಿದ್ದಾರೆ. ಈ ಬ್ಲಾಕ್ ಮೇಲ್ ಸಂಪೂರ್ಣವಾಗಿ ಅಂತ್ಯವಾಗಬೇಕು. ಹಾಗಾಗಿ ತನಿಖೆ ಸ್ವರೂಪದ ಬಗ್ಗೆ ಗೃಹ ಸಚಿವರ ಜೊತೆಗೆ ಮಾತಾಡುತ್ತೇನೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಇದು ಆಗಬೇಕು ಎಂದು ಒತ್ತಾಯಿಸಿದರು.