ಸೂರಿಕುಮೇರು: ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ವಿಭಜಕ ತಡೆಬೇಲಿ ಹೆಚ್ಚುತ್ತಿರುವ ಅಪಘಾತಗಳು

ಮಾಣಿ: ಇಲ್ಲಿನ ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಭಾಗವಾಗಿ ಹೆದ್ದಾರಿಗೆ ನಿರ್ಮಿಸಿದ ರಸ್ತೆ ವಿಭಜಕ ಕಬ್ಬಿಣದ ತಡೆಬೇಲಿಯು ಅವೈಜ್ಞಾನಿಕವಾಗಿದ್ದು ರಾತ್ರಿ ವೇಳೆ ಇದು ಚಾಲಕರಿಗೆ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಇರುವುದರಿಂದ ನಿರ್ಮಿಸಿದ ದಿನದಿಂದ ಇದುವರೆಗೆ ಅಪಘಾತಗಳು ಹೆಚ್ಚೆಚ್ಚು ಸಂಭವಿಸಿದೆ.
ಇಂದು ಗುರುವಾರ ಬೆಳಗ್ಗಿನ ಜಾವ ಮಂಗಳೂರು ಕಡೆಯಿಂದ ಬಂದ ಟ್ಯಾಂಕರೊಂದು ರಸ್ತೆ ವಿಭಜಕ ತಡೆಬೇಲಿಯನ್ನು ಸೀಳಿಕೊಂಡು ಹೋಗಿ ಹೆದ್ದಾರಿಯಲ್ಲಿ ಅಡ್ಡ ನಿಂತಿದ್ದು ಸರ್ವಿಸ್ ರಸ್ತೆಯ ಮೂಲಕ ವಾಹನಗಳು ತೆರಳಲು ವ್ಯವಸ್ಥೆ ಇದ್ದುದರಿಂದ ಯಾವುದೇ ರಸ್ತೆ ತಡೆ ಉಂಟಾಗಿರಲಿಲ್ಲ,ಈ ಪ್ರದೇಶದಲ್ಲಿ ಹಲವಾರು ಅಪಘಾತಗಳು ಈ ತಡೆಬೇಲಿಗೆ ಸಂಭವಿಸಿರುವುದರಿಂದ ಇದೊಂದು ಅವೈಜ್ಞಾನಿಕ ರಸ್ತೆ ವಿಭಜಕ ವಾಗಿರುವುದರಿಂದಲೂ ಪರ್ಯಾಯ ವ್ಯವಸ್ಥೆ ಮಾಡಬೇಕಾದದ್ದು ಹೆದ್ದಾರಿ ಇಲಾಖೆಯ ಕರ್ತವ್ಯವಾಗಿದೆ,ಮುಂದೆ ನಡೆಯುವ ಅಪಘಾತಗಳಲ್ಲಿ ಪ್ರಾಣಹಾನಿ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡರೆ ಒಳಿತು ಎಂದು ನಾಗರಿಕರು ಅಭಿಪ್ರಾಯ ಪಡುತ್ತಿದ್ದರು.