ಮುಲ್ಕಿ: ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ: ಇಬ್ಬರು ಸವಾರರು ಸಾವು

ಮುಲ್ಕಿ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಯುವಕರು ಸಾವನಪ್ಪಿದ ಘಟನೆ ಮುಲ್ಕಿ ಸಮೀಪದ ಬಟ್ಟಕೋಡಿ ಎಂಬಲ್ಲಿ ನಡೆದಿದೆ,
ಧಾರವಾಡ ಸಮೀಪದ ಕಲ್ಲೂರು ನಿವಾಸಿ ಆತ್ಮಾನಂದ ಅಂಬಿಗರ(27) ಮತ್ತು ನವೀನ್ ಹೂಗಾರ (26) ಮೃತ ದುರ್ದೈವಿಗಳು. ಬೈಕಿನಲ್ಲಿ ಅತೀ ವೇಗವಾಗಿ ಬಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಜ್ಜು ಗುಜ್ಜಾಗಿದೆ.
ಬೈಕ್ ಸವಾರ ಆತ್ಮಾನಂದ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ನವೀನ್ ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನವೀನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.