ಕಿನ್ನಿಗೋಳಿ: ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ: ಇಬ್ಬರು ಮೃತ್ಯು
ಕಿನ್ನಿಗೋಳಿ : ವಿದ್ಯುತ್ ಕಂಬಕ್ಕೆ ಬೈಕ್ ಡಿ*ಕ್ಕಿಯಾಗಿ ಬೈಕ್ ಸವಾರ ಹಾಗೂ ಸಹ ಸವಾರ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಕಿನ್ನಿಗೋಳಿ ಬಟ್ಟ ಕೋಡಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಮೂಲತಃ ಧಾರವಾಡ ಸವದತ್ತಿ ಕಲ್ಲೂರು ನಿವಾಸಿಗಳಾದ ಪದ್ಮನ್ನೂರು ಹಾಗೂ ಮೂಲ್ಕಿಯಲ್ಲಿ ವಾಸ್ತವ್ಯವಿರುವ ನವೀನ್ (26) ಆತ್ಮಾನಂದ (27) ಮೃತ ಯುವಕರು.
ಮೃತ ನವೀನ್ ಮತ್ತು ಆತ್ಮಾನಂದ ಪದ್ಮನ್ನೂರು ಕಡೆಯಿಂದ ಕಿನ್ನಿಗೋಳಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದು, ಬಟ್ಟಕೋಡಿ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಾಗ ಸವಾರ ಆತ್ಮಾನಂದರ ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ
ಅಪಘಾ*ತದಿಂದ ವಿದ್ಯುತ್ ಕಂಬಕ್ಕೆ ಕೂಡ ಹಾನಿಯಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಮೆಸ್ಕಾಂ ಕಿನ್ನಿಗೋಳಿ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.





