ಹಂಪನಕಟ್ಟೆ: ಏಕಾಏಕಿ ಮುರಿದು ಬಿದ್ದ ಮರದ ಕೊಂಬೆ, ಮೂವರು ವಿದ್ಯಾರ್ಥಿನಿಯರಿಗೆ ಗಾಯ

ಮಂಗಳೂರು: ನಗರದ ಶೆಟ್ಟಿ ಆಟೋ ಪಾರ್ಕ್, ಅಪ್ಪಣ್ಣ ಕಟ್ಟೆ ಬಳಿ ದೈತ್ಯಾಕಾರದ ಮರದ ಕೊಂಬೆಯೊಂದು ಮುರಿದು ಬಿದ್ದು ಮೂವರು ವಿದ್ಯಾರ್ಥಿನಿಯರು ತೀವ್ರ ಗಾಯಗೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ಮರಿಯಂ ಮುಫೀದಾ (18), ಫಾಹಿಮಾ ಮರಿಯಂ (17) ಹಾಗೂ ಅಬ್ಬೆಟ್ಟು ನಿವಾಸಿ ಅಫ್ರತ್ (18) ಗಾಯಗೊಂಡವರು. ಈ ಪೈಕಿ ಅಫ್ರತ್‌ಗೆ ಹೆಚ್ಚು ಗಾಯವಾಗಿದೆ.
ಈ ಪ್ರದೇಶ ಜನನಿಬಿಡವಾಗಿದ್ದು ಏಕಾಏಕಿ ಮರದ ಕೊಂಬೆ ಮುರಿದು ಬಿದ್ದ ಸಂದರ್ಭದಲ್ಲಿ ಅನೇಕ ಸಾರ್ವಜನಿಕರು ಅಲ್ಲೇ ನಿಂತಿದ್ದು ಬಹು ದೊಡ್ಡ ಅವಘಡವೊಂದು ತಪ್ಪಿದೆ.