ಮಡಿಕೇರಿ: ಕೆರೆಯಲ್ಲಿ ಮುಳುಗಿ 9 ವರ್ಷದ ಬಾಲಕಿ ಸಾವು

ಮಡಿಕೇರಿ: ಆಟವಾಡಲೆಂದು ಕೆರೆಗೆ ಇಳಿದು ನಂತರ ಮೇಲೆ ಬರಲು ಆಗದೆ 9 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಚೆನ್ನಂಗೊಲ್ಲಿಯಲ್ಲಿ ನಡೆದಿದೆ.
ತೋಟದ ಕೆಲಸಗಾರರಾದ ಭವಾನಿ ಎಂಬುವವರ ಮಗಳು ಮೃತ ಬಾಲಕಿ. ಈಕೆ ಹಾಗೂ ತನ್ನ ಇಬ್ಬರು ಸ್ನೇಹಿತರೊಂದಿಗೆ ಮೊದಲಿಗೆ ಕೆರೆಯ ಪಕ್ಕದಲ್ಲೇ ಆಟವಾಡುತ್ತಿದ್ದರು. ನಂತರ ಮೂರು ಜನರು ಕೆರೆಯಲ್ಲಿ ನೀರು ಇಲ್ಲದ ಕಾರಣ ಹಾರಿದ್ದಾರೆ. ಆದರೆ ಕೆರೆಯಲ್ಲಿ ಕೆಸರು ಇದ್ದರಿಂದ ಮೂವರು ಅದರೊಳಗೆ ಸಿಲುಕಿ ಕಿರುಚಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾರ್ಮಿಕರು ಇಬ್ಬರನ್ನು ರಕ್ಷಿಸಿದ್ದರು. ಆದರೆ ಈಕೆ ಕೆಸರಿನ ಒಳಗೆ ಹೋಗಿ ಅಲ್ಲಿ ಉಸಿರಾಡಲು ಆಗದೇ ಸಾವನ್ನಪ್ಪಿದ್ದಾಳೆ.