ಬಾಡಿಗೆ ಮನೆಯ ಬಳಿ ಪಾರ್ಕಿಂಗ್ ವಿಚಾರಕ್ಕೆ ಗಲಾಟೆಯಲ್ಲಿ ವ್ಯಕ್ತಿ ಸಾವು

ಚಂಡೀಗಢ: ಬಾಡಿಗೆ ಮನೆಯ ಬಳಿ ಪಾರ್ಕಿಂಗ್ ವಿಚಾರಕ್ಕೆ ಆಗ ಗಲಾಟೆಯಲ್ಲಿ ನೆರೆ ಮನೆಯವನಿಂದ ಹಲ್ಲೆಗೊಳಗಾಗಿದ್ದ ವಿಜ್ಞಾನಿಯೊಬ್ಬರು ಸಾವಿಗೀಡಾಗಿರುವ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ.
ಮೊಹಾಲಿಯ ಭಾರತೀಯ ವಿಜ್ಞಾನ ಶಿಕ್ಷಣ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿ ಡಾ. ಅಭಿಷೇಕ್ ಸ್ವರ್ಣಕರ್ (39) ಮೃತಪಟ್ಟಿದ್ದಾರೆ.
ಇವರು ಸೆಕ್ಟರ್ 67 ರಲ್ಲಿರುವ ಮನೆಯಲ್ಲಿ ಬಾಡಿಗೆಗೆ ಇದ್ದರು. ಮಂಗಳವಾರ ರಾತ್ರಿ ಪಾರ್ಕಿಂಗ್ ವಿಚಾರಕ್ಕೆ ನೆರೆಮನೆಯ ಮಾಂಟಿ ಎಂಬಾತನೊಂದಿಗೆ ಗಲಾಟೆ ನಡೆದು ಹಲ್ಲೆಗೊಳಗಾಗಿದ್ದರು.