March 14, 2025

ಮೂಡುಬಿದಿರೆ: ಬ್ರಹ್ಮಕಲಶೋತ್ಸವದ ಕೆಲಸ ಮಾಡುತ್ತಿದ್ದ ಹೃದಯಾಘಾತ: ಬಜರಂಗದಳದ ಸಂಯೋಜಕ ಸಾವು

0

ಮೂಡುಬಿದಿರೆ: ಮೂಡುಬಿದಿರೆ ನಗರ ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ (30) ಮಾ. 11ರಂದು ರಾತ್ರಿ ನಿಧನ ಹೊಂದಿದರು.

ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಜೇಶ್ ಹೃದಯಾಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಕೊನೆಯುಸಿರೆಳೆದರು. ಇಂದು 10.30ಕ್ಕೆ ವಿದ್ಯಾಗಿರಿಯಲ್ಲಿರುವ ಸ್ವಗೃಹದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂಬ ಮಾಹಿತಿಯಿದೆ.

 

 

Leave a Reply

Your email address will not be published. Required fields are marked *

error: Content is protected !!