ಕೊಡಗಿನ ಹಲವೆಡೆ ಭೂ ಕಂಪನದ ಅನುಭವ: ಗ್ರಾಮಸ್ಥರ ಆತಂಕ

ಮಡಿಕೇರಿ: ಕೊಡಗಿನ ಹಲವೆಡೆ ಬುಧವಾರ ಮಾ.12ರ ಬೆಳಗ್ಗೆ 10:50ರ ಸುಮಾರಿಗೆ ಭೂ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಗೇರಿ, ಮದೆನಾಡು ಗ್ರಾಮ, ಬೆಟ್ಟತ್ತೂರಿನ ಸುತ್ತಮುತ್ತಲಿನಲ್ಲಿ ಕಂಪನದ ಅನುಭವವಾಗಿದೆ. ಪದ್ಮನಾಭ ಮತ್ತು ಭರತ್ ಎಂಬುವವರ ಮನೆಯ ಅಸುಪಾಸಿನಲ್ಲಿ ಭೂಮಿ ಕಂಪಿಸಿದೆ. 2018ರಲ್ಲಿಯೂ ಈ ಭಾಗದಲ್ಲಿ ಕಂಪನದ ಅನುಭವ ಆಗಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.