ದಾಖಲೆಯ 16ನೇ ರಾಜ್ಯ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ: ಈ ಸಲದ ಆಯವ್ಯಯ 4 ಲಕ್ಷ ಕೋಟಿ ರೂ.?
ಬೆಂಗಳೂರು: ಮಾರ್ಚ್ 7 ರಂದು ಬೆಳಿಗ್ಗೆ 10:15ಕ್ಕೆ, ತಮ್ಮ ದಾಖಲೆಯ 16ನೇ ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಈ ಸಲದ ಆಯವ್ಯಯ 4 ಲಕ್ಷ ಕೋಟಿ ರೂ.ಗೂ ಮೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಸಿಎಂ ಆದಷ್ಟು ವಾಸ್ತವ ಹಾಗೂ ಸಮತೋಲನದ ಬಜೆಟ್ ಮಂಡಿಸುವ ಪ್ರಯತ್ನದಲ್ಲಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು, ಬೃಹತ್ ಯೋಜನೆಗಳಿಗೆ ಅನುದಾನ ಸೇರಿದಂತೆ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬುದ್ಧಿವಂತಿಕೆಯಿಂದ ಬಜೆಟ್‌ಗೆ ತಯಾರಿ ಮಾಡಿಕೊಂಡಿದ್ದಾರೆ.


